ರಾಘವೇಂದ್ರ ರಾಯರ ಕಂಡೀರಾ |
ನಿಜ ದರುಶನವ ಕೊಡುವ ಗುರುಗಳ ಕಂಡೀರಾ ||
ರಾಘವೇಂದ್ರ ರಾಯರ ಕಂಡೀರಾ (ಪ)
ತುಂಗಾತೀರದಿ ನಿಂತವರಾ |
ಮಂತ್ರಾಲಯದ ಮಹಾತ್ಮರಾ |
ಅಗಣಿತ ಮಹಿಮೆಗಳ ಮಾಡುತ
ನರಹರಿಯ ಕೊಂಡಾಡುವವರಾ ||
ರಾಘವೇಂದ್ರ ರಾಯರ ಕಂಡೀರಾ | 1
ಎದುರಲಿ ಹನುಮನ ಸೇವಿಸುತಾ |
ರಾಮನ ಭಕ್ತನ ಕಂಡೀರಾ |
ಮಂಚಾಲೆಮ್ಮನ ಮಗನನು ಕಂಡೀರಾ ||
ರಾಘವೇಂದ್ರಾಯರ ಕಂಡೀರಾ (2)
ದುರಿತ ದುಃಖಗಳು ಓಡಿಸುವವರ ಕಂಡೀರಾ |
ಜೀವನ ಪಾವನ ಮಾಡುವ ಗುರುಗಳ ಕಂಡೀರಾ |
ಕಾಮಧೇನುವಿನಂತೆ ಕರುಣಿಸುವ ಯೋಗಿಯ ಕಂಡೀರಾ ||
ರಾಘವೇಂದ್ರ ರಾಯರ ಕಂಡೀರಾ (3)
ಕೃಷ್ಣನ ಲೀಲೆಯ ನೋಡುತ ವೃಂದಾವನದಿ
ಕುಳಿತವರಾ | ತುಳಸಿಮಾಲೆಯ ಕೈಯಲ್ಲಿ ಹಿಡಿದು |
ಜಹ್ನವಿ ವಿಠಲನ ಧ್ಯಾನದಿ ಕುಳತ ಯೋಗಿವರ್ಯರ ||
ರಾಘವೇಂದ್ರ ರಾಯರ ಕಂಡೀರಾ (4)