ತ್ವಂ ಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ||ಅ.ಪ. ||
ಕೈಲಾಸಸದ್ಮ ಚಿತಿಚೇಲ ಭೂಷಣ ಮನೋ
ಮೈಲಿಗೆಯ ಪರಿಹರಿಸೊ ನೀಲಕಂಠ
ಕಾಲ ಕಾಲಗಳಲ್ಲಿ ಕಾಲನಿಯಾಮಕನ
ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ ||1||
ಪಾರ್ವತೀರಮಣ ನೀ ಮೋಹಶಾಸ್ತ್ರವ ರಚಿಸಿ
ಶಾರ್ವರೀಚರರ ಮೋಹಿಸಿದೆ ಹಿಂದೆ
ಶುಕ ವ್ಯಾಧ ಜೈಗೀಷ ರೂಪದಲಿ
ಈರ್ವಗೆ ಚರಿಯದಲಿ ಹರಿಯ ಮೆಚ್ಚಿಸಿದೆ || 2 ||
ಸುರನದೀಧರ ನಿನ್ನ ಚರಿತೆಗಳ ವರ್ಣಿಸಲು
ಸುರಪಮುಖ ಸುಮನಸಾದ್ಯರಿಗಸದಳಾ
ಸ್ಮರನಪಿತ ಶ್ರೀ ಜಗನ್ನಾಥ ವಿಠ್ಠಲನ ಸಂ
ಸ್ಮರಣೆಯನು ಕೊಟ್ಟು ಉದ್ಧರಿಸು ದಯದಿಂದ || 3 ||