ಮನೆ ಯೋಗಾಸನ ಹಗ್ಗದ ಮೂಲಕ ಶಿರ್ಸಾಸನ ಮಾಡುವುದು ಹೇಗೆ? ಇದರ ಪ್ರಯೋಜನ ಏನು?

ಹಗ್ಗದ ಮೂಲಕ ಶಿರ್ಸಾಸನ ಮಾಡುವುದು ಹೇಗೆ? ಇದರ ಪ್ರಯೋಜನ ಏನು?

0

ಬದಲಾದ ಕಾಲದಲ್ಲಿ ಹೆಚ್ಚಿನ ಜನರು ಕುಳಿತಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ರಕ್ತದೊತ್ತಡ ಹೆಚ್ಚಾಗುವ ಜೊತೆಗೆ ಮಾನಸಿಕ ಒತ್ತಡವೂ ಹೆಚ್ಚಾಗುತ್ತಿರುತ್ತದೆ. ಯೋಗವು ಈ ಒತ್ತಡವನ್ನು ನಿವಾರಿಸಲು ಒಂದುಪರಿಣಾಮಕಾರಿ ಮಾರ್ಗ ಎಂದು ಬಹುತೇಕರು ಒಪ್ಪುತ್ತಾರೆ. ಕೆಲವರು ಒತ್ತಡ ನಿವಾರಣೆಗಾಗಿ ಸಂಗೀತ ಕೇಳುತ್ತಾರೆ. ಪ್ರವಾಸ ಮಾಡುತ್ತಾರೆ. ಆದರೆ ಸಮಯದ ಕೊರತೆಯಿಂದಾಗಿ ಬಹುತೇಕರಿಗೆ ಈ ಕ್ರಮಗಳನ್ನು ಅನುಸರಿಸುವುದು ಕಷ್ಟವಾಗಬಹುದು. ಹಾಗಾಗಿ ಯೋಗವು ಒಂದು ಸುಲಭ ಮತ್ತು ಸರಳ ವಿಧಾನ ಎಂದು ನಂಬಲಾಗಿದೆ.

ಯೋಗದಿಂದಾಗಿ ಚಯಾಪಚಯ ವ್ಯವಸ್ಥೆ ವೃದ್ಧಿಸುತ್ತದೆ. ಶಿರ್ಸಾಸನವು ಇಡೀ ಯೋಗದಲ್ಲಿ ಅನೇಕ ಜನರ ನೆಚ್ಚಿನ ಭಂಗಿ. ಒಬ್ಬ ವ್ಯಕ್ತಿಯು ಶಿರ್ಸಾಸನವನ್ನು ಪ್ರಾರಂಭಿಸುವ ಮೊದಲು, ಪರಿಣಿತ ಯೋಗ ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸೂಕ್ತ. ಈ ಯೋಗ ಭಂಗಿಯು ಸರಿಯಾದ ರೀತಿಯಲ್ಲಿ ಮತ್ತು ತಜ್ಞರ ಸುರಕ್ಷತೆಯಡಿಯಲ್ಲಿ ಮಾಡಿದರೆ ಫಲಿತಾಂಶ ಸಿಗುತ್ತದೆ.

ಶಿರ್ಸಾಸನವು ರಕ್ತದೊತ್ತಡ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶಿರ್ಸಾಸನವು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಮನೆಯಲ್ಲಿ ತಲೆಯ ಕೆಳಗೆ ಒಂದು ದಿಂಬನ್ನಿಟ್ಟು ಶಿರ್ಸಾಸನ ಮಾಡುವುದನ್ನು ನೀವು ನೋಡಿರಬಹುದು. ಆದರೆ, ಹಗ್ಗದ ಮೂಲಕವೂ ಶಿರ್ಸಾಸನವನ್ನು ಮಾಡಬಹುದು ಎಂಬುದನ್ನು ನೀವು ನಂಬುತ್ತೀರಾ?

ರೋಪ್ ಯೋಗ

ಮೊದಲು ಯೋಗ ರೋಪ್ಅನ್ನು ಗೋಡೆಯಲ್ಲಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ರಿಂಗ್ಗೆ ಸೇರಿಸಿ. ಮತ್ತೊಂದು ಬದಿಯಲ್ಲೂ ಅದೇ ರೀತಿ ಹಗ್ಗವನ್ನು ರಿಂಗ್ಗೆ ಹಾಕಿ.

ಈಗ ಗೋಡೆಗೆ ಎದುರಾಗಿ ನಿಂತು ಎರಡೂ ಕೈಗಳಲ್ಲಿ ಹಗ್ಗವನ್ನು ಹಿಡಿಯಿರಿ. ಹಗ್ಗವನ್ನು ಬಿಗಿಯಾಗಿ ಹಿಡಿದು ನಿಮ್ಮ ಎರಡೂ ಕಾಲುಗಳನ್ನು ಗೋಡೆಯ ಮೇಲೆ ಇಡಿ. ಈ ರೀತಿ ಇಟ್ಟನಂತರ ಸ್ವಲ್ಪ ಕುಕ್ಕುರುಗಾಲಲ್ಲಿ ಕುಳಿತುಕೊಂಡು ಕಾಲನ್ನು ಸ್ವಲ್ಪ ಸ್ವಲ್ಪವೇ ಮೇಲೆಕ್ಕೆ ಎತ್ತುತ್ತಿರಿ. ಈ ಪ್ರಕ್ರಿಯೆಯಲ್ಲಿ ನೀವು ಯಾವುದೇ ಕಾರಣಕ್ಕೂ ಕಾಲನ್ನು ನೇರವಾಗಿ ಮಾಡಿ ಗೋಡೆಯ ಮೇಲಕ್ಕೇರಲು ಯತ್ನಿಸಬೇಡಿ.

ಏಕೆಂದರೆ ಕಾಲನ್ನು ನೇರವಾಗಿ ಮಾಡಿ ಮೇಲಕ್ಕೆ ಏರುವ ಪ್ರಯತ್ನದಲ್ಲಿ ನೀವು ತಲೆ ಕೆಳಗಾಗುವುದು ತಪ್ಪಬಹದು. ಅಥವಾ ನಿಮ್ಮ ದೇಹದ ಸಮತೋಲನ ಸಿಗದೆ ಶಿರ್ಸಾಸನ ಮಾಡಲು ಸಾಧ್ಯವಾಗದೆ ಇರಬಹುದು. ಆದ ಕಾರಣದಿಂದಾಗಿ ನೀವು ಕಾಲನ್ನು ಮಡಚಿ ನಿಮ್ಮ ಪೃಷ್ಠವು ಹಿಮ್ಮಡಿಗೆ ತಗಲುವಂತೆ ಮಾಡಿ ನಿಧಾನವಾಗಿ ಗೋಡೆಯ ಮೇಲಕ್ಕೆ ಏರಲು ಪ್ರಯತ್ನ ಮಾಡುತ್ತಲಿರಿ. ಆಗ ಸುಲಭವಾಗಿ ನೀವು ತಲೆಕೆಳಗಾಗಿ ನಿಲ್ಲಬಹುದು.

ಹಗ್ಗದ ಮೇಲೆ ನಿಮ್ಮ ದೇಹದ ಸಂಪೂರ್ಣ ಭಾರವನ್ನು ಬಿಡುವ ಮೂಲಕ ತಲೆಕೆಳಗಾಗಿ ನಿಲ್ಲಲು ಪ್ರಯತ್ನಿಸಿ. ಈ ರೀತಿ ಶಿರ್ಸಾಸನ ಮಾಡುವ ಭರದಲ್ಲಿ ಯಾವುದೇ ಕಾರಣಕ್ಖೂ ನಿಮ್ಮ ಮುಖ ಗಂಟುಹಾಕಿಕೊಲ್ಳಬೇಡಿ. ನಗು ಮುಖದಲ್ಲಿ ನೀವು ಶಿರ್ಸಾಸನವನ್ನು ಮಾಡುವುದರಿಂದ ಅದರ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಯಾವುದೇ ಕಾರಣಕ್ಕೂ ಒತ್ತಡವನ್ನು ಮುಖದಲ್ಲಿ ತೋರಿಸಬೇಡಿ.

ಈ ರೀತಿ ಹತ್ತು ನಿಮಿಷಗಳ ಕಾಲ ನಿಂತ ನಂತರ ನಿಧಾನವಾಗಿ ನಿಮ್ಮ ಕಾಲನ್ನು ಮಡಚಿ ಗೋಡೆಯ ಸಹಾಯದಿಂದಾಗಿ ಮತ್ತೆ ಯಥಾ ಸ್ಥಿತಿಗೆ ಬನ್ನಿ. ಈ ರೀತಿ ನೀವು ಶಿರ್ಸಾಸನ ಮಾಡಿದ ನಂತರ ಸ್ವಲ್ಪ ಬಗ್ಗಿ ನಿಮ್ಮ ಎರಡೂ ಕೈಗಳಿಂದ ಕಾಲನ್ನು ಮುಟ್ಟಿಸಿ. ಆಗ ಬೆನ್ನು ನೋವು ಕಡಿಮೆಯಾಗುತ್ತದೆ.

ಮತ್ತೊಂದು ವಿಧಾನವನ್ನು ಪ್ರಯತ್ನಿಸಿ

ಈಗ ಎರಡೂ ರಿಂಗ್ಗಳಿಗೆ ಅಳವಡಿಸಲಾಗಿರುವ ಹಗ್ಗಗಳ ಪೈಕಿ ಒಂದು ಬದಿಗೆ ಇನೊಂದು ಯೋಗ ರೋಪ್ನಿಂದ ಲೂಪ್ ಮಾಡಿ ಮತ್ತೊಂದು ಬದಿಗೆ ಹಗ್ಗದ ಇನ್ನೊಂದು ತುದಿಯಿಂದ ಗಂಟು ಹಾಕಿ. ಈಗ ಉಯ್ಯಾಲೆಯ ಮಾದರಿಯಲ್ಲಿ ಹಗ್ಗದ ಆಕಾರ ನಿರ್ಮಾಣವಾಗುತ್ತದೆ.

ಈಗ ಯು ಆಕಾರದಲ್ಲಿ ಕಾಣುವ ಕೆಳಗಿನ ಭಾಗಕ್ಕೆ ಒಂದು ಮೆದುವಾದ ದಿಂಬನ್ನು ಹಾಕಿ. ಮ್ಯಾಟ್ ಹಾಕಿದರೂ ನಡೆಯುತ್ತದೆ.

ಈಗ ಮೊದಲಿನಂತೆ ಗೋಡೆಗೆ ಎದುರಾಗಿ ನಿಲ್ಲಿ. ಈಗ ಉಯ್ಯಾಲೆ ರೀತಿ ಇರುವ ಹಗ್ಗವನ್ನು ನಿಮ್ಮ ಬೆನ್ನಿನ ಹಿಂದೆ ಬರುವಂತೆ ನೋಡಿಕೊಳ್ಳಿ. ಉಯ್ಯಾಲೆಯನ್ನು ನಿಮ್ಮ ಪೃಷ್ಠದ ಕೆಳಗೆ ಹಾಕಿಕೋಂಡು. ಕಾಲನ್ನು ಗೋಡೆಯ ಮೇಲೆ ಇಟ್ಟು ಸ್ವಲ್ಪ ಹಿಂದಕ್ಕೆ ಸರಿಯಿರಿ. ಈಗ ಕಾಲನ್ನು ಮಡಚಿ ನಿಮ್ ಪೃಷ್ಠವು ಹಿಮ್ಮಡಿಗೆ ಸ್ಪರ್ಶಿಸುವಂತೆ ಮಾಡಿ. ಈಗ ಮೊದಲಿನಂತೆ ಕಾಲನ್ನು ಗೋಡೆಯ ಮೇಲಕ್ಕೆ ಸರಿಸುತ್ತಾ ತೆಲಯನ್ನು ಹಿಂದಕ್ಕೆ ಬರುವಂತೆ ಮಾಡಿ.

ಈಗ ಕಾಲನ್ನು ಸಂಪೂರ್ಣವಾಗಿ ಮೇಲಕ್ಕೆ ಎತ್ತಿ. ತಲೆಯನ್ನು ಉಯ್ಯಾಲೆ ಮುಭಾಗಕ್ಕೆ ಬರುವಂತೆ ಹಾಗೂ ಕಾಲನ್ನು ಉಯ್ಯಾಲೆಯ ಹಿಂಭಾಗಕ್ಕೆ ಬರುವಂತೆ ಮಾಡಿ ಸಂಪೂರ್ಣವಾಗಿ ತಲೆಕೆಳಗಾಗಿ ನಿಲ್ಲಿ. ಈ ಭಂಗಿಯಲ್ಲಿ ನೀವು ನಮಸ್ಕಾರ ಭಂಗಿಯಲ್ಲಿ ಇರಬಹುದು ಅಥವಾ ಎರಡೂ ಕೈಗಲಳನ್ನು ನೀವು ಕೆಳಗೆ ಬಿಡಬಹುದಾಗಿದೆ.

ಈ ಭಂಗಿಯಲ್ಲಿ ನೀವು ಹತ್ತು ನಿಮಷ ಇದ್ದರೆ ಅದರ ಸಂಪೂರ್ಣ ಫಲಿತಾಂಶ ನಿಮಗೆ ಸಿಗುತ್ತದ. ಜೊತೆಗೆ ರಕ್ತದ ಒತ್ತಡವೂ ಸಹ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಪ್ರಯೋಜನಗಳು

ಪಿಟ್ಯುಟರಿ ಕಾರ್ಯಗಳನ್ನು ಹೆಚ್ಚಿಸುತ್ತದೆ

ಶಿರ್ಸಾಸನವು ಪಿಟ್ಯುಟರಿ ಗ್ರಂಥಿಗೆ ತುಂಬಾ ಒಳ್ಳೆಯದು. ಏಕೆಂದರೆ ಅದು ಇತರ ಅನೇಕ ಸಂಬಂಧಿತ ಗ್ರಂಥಿಗಳ ಕೆಲಸವನ್ನು ನಿಯಂತ್ರಿಸುತ್ತದೆ. ಇವು ಮೂತ್ರಜನಕಾಂಗದ ಗ್ರಂಥಿ, ಥೈರಾಯ್ಡ್ ಗ್ರಂಥಿ ಮತ್ತು ಮುಂತಾದವುಗಳು ಅಂತಃಸ್ರಾವಕ ವ್ಯವಸ್ಥೆಯನ್ನು ರೂಪಿಸುತ್ತವೆ. ಇದು ನಾಳವಿಲ್ಲದ ಗ್ರಂಥಿಯಾಗಿದ್ದು, ಇದು ಹಾರ್ಮೋನುಗಳನ್ನು ನೇರವಾಗಿ ರಕ್ತಪ್ರವಾಹಕ್ಕೆ ಸ್ರವಿಸುತ್ತದೆ. ಇದರೊಂದಿಗೆ ಶಿರ್ಸಾಸನವು ನರಮಂಡಲವನ್ನು ಪುನರುಜ್ಜೀವನಗೊಳಿಸುತ್ತದೆ ಜೊತೆಗೆ ಅಂತಃಸ್ರಾವಕ ವ್ಯವಸ್ಥೆಯ ನಿಯಂತ್ರಣವನ್ನು ಹೆಚ್ಚಿಸುತ್ತದೆ.

ಶಿರ್ಸಾಸನ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಗ್ರಂಥಿಗಳ ಅಸ್ವಸ್ಥತೆಗಳನ್ನು ಸರಿಪಡಿಸಲು ಮತ್ತು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಧುಮೇಹ ಚಿಕಿತ್ಸೆ

ಮಧುಮೇಹವು ಮೇದೋಜ್ಜೀರಕ ಗ್ರಂಥಿಯ ಚಟುವಟಿಕೆಗಳ ತೊಂದರೆಯನ್ನು ಒಳಗೊಂಡಿರುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಬರುವ ಕಿಣ್ವಗಳು ಕಾರ್ಬೋಹೈಡ್ರೇಟ್ಗಳು, ಲಿಪಿಡ್ಗಳು, ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರೋಟೀನ್ಗಳು ಜೀರ್ಣಕಾರಿ ಎಕ್ಸೊಕ್ರೈನ್ ಗ್ರಂಥಿಯಾಗಿ ಕಾರ್ಯನಿರ್ವಹಿಸಿದಾಗ ಅದನ್ನು ಒಡೆಯಲು ಸಹಾಯ ಮಾಡುತ್ತದೆ. ಎಂಡೋಕ್ರೈನ್ ಗ್ರಂಥಿಯಾಗಿ ಅದರ ಕಾರ್ಯದಲ್ಲಿ, ಇದು ರಕ್ತದಲ್ಲಿನ ಸಕ್ಕರೆಯನ್ನು ಚಯಾಪಚಯಗೊಳಿಸಲು ಸಹಾಯ ಮಾಡುವ ಇನ್ಸುಲಿನ್ ಅನ್ನು ಸ್ರವಿಸುತ್ತದೆ.

ಶಿರ್ಸಾಸನವು ನಮ್ಮ ದೇಹವು ದುಗ್ಧರಸ ವ್ಯವಸ್ಥೆಯ ಮೂಲಕ ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಸಿರ್ಸಾಸನ ದುಗ್ಧರಸ ವ್ಯವಸ್ಥೆಯ ಮೇಲೆ ಉತ್ತೇಜಕ ಪರಿಣಾಮವನ್ನು ಬೀರುತ್ತದೆ.

ಹಿಂದಿನ ಲೇಖನಪಂಪಾಪುರ ನಿವಾಸ ಪ್ರಮಥರೇಶಾ || ಪ ||
ಮುಂದಿನ ಲೇಖನಗುರು ಶುಕ್ರ ಶನಿಗ್ರಹ ದೋಷ ಇದ್ದರೆ ಈ ಪರಿಹಾರ ಮಾಡಿ