ಸಿರಿದಾದ ನಾಡು ಅದುವೆ ಕರುನಾಡು
ಸಿರಿದಾದ ದೈವ ಅದುವೇ ಅನ್ನಪೂರ್ಣೇಯ ಹೊರನಾಡು, (ಪ)
ಹಸಿರು ಉಡುಗೆಯ ಧರಿಸಿದ ಭೂರಮೆಯ
ಮಧ್ಯ ತಾನು ಇರುವ ದೇವಿಯ
ಅನ್ನಪೂರ್ಣೇ ನಗುತಿಹಳು ಇಲ್ಲಿ
ಪಾರ್ವತಿಯ ಅವತಾರವು ಬೇಡಿದೆಲ್ಲ ನೀಡುವಳು (1)
ಅನ್ನಪೂರ್ಣೇ ಸದಾಪೂರ್ಣೆಯಾಗಿ ಅನ್ನ ನೀಡುತಲಿ
ಭಿಕ್ಷಾಂದೇಹಿ ಪಾರ್ವತಿ ಎನ್ನಲು ಮಡಿಲು ತುಂಬುತಲಿ
ಪರಶಿವನ ರಾಣಿ ಮೂರ್ಜದ ತಾಯಿಯಾಗಿ
ಕೈಯೊಳಗೆ ಸೌಟುಹಿಡಿದು ನಗುತಿಹಳು ದಾನಿಯಾಗಿ, (2)
ಜಗದಂಬೆಯ ಬಳಿ ಬಂದು ಬೇಡಿದರೆ ಇಲ್ಲವೆನ್ನಳು
ತನ್ನ ಮಕ್ಕಳ ತಾನು ಸಲಹುತಿರುವಳು.
ಲೋಕಮಾತೆ ಜಗದ್ವಿಖ್ಯಾತೆ ಪಾಹಿ, ಪಾಹಿ.
ನಿನ್ನ ಭಕ್ತರನ್ನು ಉದ್ದರಿಸು ದೇವಿ ಜಹಾನ್ವಿ
ವಿಠಲನ ಪ್ರಿಯೆ (3)