ಇರಲಿ ನಿನ್ನ ದಯೆ ನನ್ನ ಮ್ಯಾಲೆ |
ಇರಲಿ ನಿನ್ನ ಕೃಪೆ ತಲೆಯಾ ಮ್ಯಾಲೆ || ಪ
ನಾನೇನು ಬೇಡಲಾರೆ |
ನಾನೇನು ಕೇಳಲಾರೆ || ಅ ಪ
ದೊರಕಿದೆ ನಿನ್ನ ದಯೆವೊಂದು |
ಬದುಕಿನಲ್ಲಿ ಬಂದ ಭಾಗ್ಯವದು |
ಚರಣ ಕಮಲದೋಳಿರಿಸಿ ಸಲಹುವ ತಾಯಿಯೇ |
ಕರುಣ ಕಟಾಕ್ಷವ ತೋರಿದೆ ಅಮ್ಮಾ || 1
ದೀನೋದ್ಧಾರಕಳು ನೀ ಮಾತೆ |
ಮನಕಾಮನೆಯ ಪೂರೈಸುವ ಸಂಪ್ರೀತೆ |
ಜನನಿಯು ನೀನೇ, ಜನಕನು ನೀನೆ |
ಗುರುವಾಗಿ ದಾರಿ ತೋರುತ ನಡೆದೆ ತಾಯೇ || 2
ಕುಲಸ್ವಾಮಿ ತುಳಜಾ ಭವಾನಿಯೇ |
ಜೊತೆಯಾಗಿ ನೀನಿರಲು ಭಯವೇನೆ |
ಅನವರತವು ಸಲಹುತಲಿರುವೆ |
ಜಹ್ನವಿ ವಿಠಲನ ತೋರುತಲಿರುವೆ. || 3