ಮನೆ ದೇವರ ನಾಮ ಇರಲಿ ನಿನ್ನ ದಯೆ

ಇರಲಿ ನಿನ್ನ ದಯೆ

0

ಇರಲಿ ನಿನ್ನ ದಯೆ ನನ್ನ ಮ್ಯಾಲೆ |

ಇರಲಿ ನಿನ್ನ ಕೃಪೆ ತಲೆಯಾ ಮ್ಯಾಲೆ || ಪ

ನಾನೇನು ಬೇಡಲಾರೆ |

ನಾನೇನು ಕೇಳಲಾರೆ || ಅ ಪ      

ದೊರಕಿದೆ ನಿನ್ನ ದಯೆವೊಂದು |

ಬದುಕಿನಲ್ಲಿ ಬಂದ ಭಾಗ್ಯವದು |

ಚರಣ ಕಮಲದೋಳಿರಿಸಿ ಸಲಹುವ ತಾಯಿಯೇ |

ಕರುಣ ಕಟಾಕ್ಷವ ತೋರಿದೆ ಅಮ್ಮಾ || 1        

ದೀನೋದ್ಧಾರಕಳು ನೀ ಮಾತೆ |

ಮನಕಾಮನೆಯ ಪೂರೈಸುವ ಸಂಪ್ರೀತೆ |

ಜನನಿಯು ನೀನೇ, ಜನಕನು ನೀನೆ |

ಗುರುವಾಗಿ ದಾರಿ ತೋರುತ ನಡೆದೆ ತಾಯೇ || 2      

ಕುಲಸ್ವಾಮಿ ತುಳಜಾ ಭವಾನಿಯೇ |

ಜೊತೆಯಾಗಿ ನೀನಿರಲು ಭಯವೇನೆ |

ಅನವರತವು ಸಲಹುತಲಿರುವೆ |

ಜಹ್ನವಿ ವಿಠಲನ ತೋರುತಲಿರುವೆ. || 3

ಹಿಂದಿನ ಲೇಖನಮೈಸೂರು: ಅರಮನೆ ಆವರಣದಲ್ಲಿನ ಸಕಲ ಸಿದ್ಧತೆಗಳನ್ನು ಪರಿಶೀಲಿಸಿದ ಡಾ.ಹೆಚ್.ಸಿ.ಮಹದೇವಪ್ಪ
ಮುಂದಿನ ಲೇಖನಅಶ್ವಗಂಧ