ಧರಿಸಿದೆನೋ, ಧರಿಸಿದೆನೋ ಗುರುರಾಯ ನಿನ್ನ
ಮಂತ್ರಾಕ್ಷತೆ ಶಿರದಲ್ಲಿ ಬಲವ ಬೇಡುತ | (ಪ)
ನಿನ್ನ ಆಲಯದೊಳಗೆ ಬರುವ ಭಕ್ತರ ನೋಡುತ |
ಪಾವನ ಜನರ ಭಕ್ತಿ, ಭಾವ ಆನಂದಿಸುತ |
ನಾಲ್ಕು ದಿಕ್ಕುಗಳಲ್ಲಿ ಭಕ್ತ ಜನರ ಸೇವೆ ನೋಡುತ |
ಧರಿಸಿದೆನೋ, ಧರಿಸಿದೆನೋ ಗುರುರಾಯ ನಿನ್ನ (1)
ಶುಭ ಸಂಜೆಗೆ ನಿನ್ನ ರಥವ ಎಳೆಯುವದು ನೋಡುತ್ತಾ |
ಪ್ರಕಾರದಿ ಪ್ರದಕ್ಷಣೆಯ ಹಾಕಿ ಬರುವ ಉತ್ಸವ ಮೂರುತಿ |
ಆನಂದ, ಆನಂದ ಎನಗಾಯಿತೋ ||
ಧರಿಸಿದೆನೋ, ಧರಿಸಿದೆನೋ ಗುರುರಾಯ ನಿನ್ನ (2)
ಬಲಬೇಡುವೆ ಗುರುವೇ ಹರಸು ನಿ ಸತತ |
ದಾರಿ ತೋರಿತ ನಿ ಬಾರೋ ಎನ್ನುತ |
ಎನ್ನ ಬಾಳ ರಥವ ಮುನ್ನುಡಿಸು ಎಂದು ಬೇಡುತ್ತ ||
ಧರಿಸಿದೆನೋ , ಧರಿಸಿದೆನೋ ಗುರುರಾಯ ನಿನ್ನ (3)
ವರಗುರುವೆ ಪೊರೆಯೆಂದು ನಿನ್ನ ಬಳಿಗೆ ಬಂದೆ, |
ಗುರುರಾಯರ ರಾಘವೇಂದ್ರ ಸಲಹು ನೀನು |
ಜಾಹ್ನವಿ ವಿಠಲನ ಬಂಧು ||
ಧರಿಸಿದೆನೋ , ಧರಿಸಿದೆನೋ ಗುರುರಾಯ ನಿನ್ನ (4)