ಮನೆ ದೇವರ ನಾಮ ರಾಘವೇಂದ್ರ

ರಾಘವೇಂದ್ರ

0

ಮಂತ್ರಾಲಯಕ್ಕೆ ಹೋಗಿ ಅಲ್ಲೇ ಇದ್ದು ಜೀವನ ಮಾಡೋಣ |

ಹರಿ, ವಾಯು ಗುರುಗಳ ನೆನೆಯುತ ದಿನಗಳ ಕಳೆಯೋಣ || (ಪ)    

ನಾಲ್ಕು ದಿಕ್ಕಲಿ ರಾಯರ ಮಹಿಮೆಯ ಕೇಳುತ |

ನಾಳಿನ ಚಿಂತೆ ಮಾಡದೆ ದಿನವೂ ಕಲಿಯುತ |

ಮೂಲರಾಮನ ಸೇವೆಯ ಮಾಡವ ಭಾಗ್ಯವ ಕೊಡು ಎನ್ನುತ |

ಗುರುರಾಯರ ಅನುಗ್ರಹ ಪಡೆಯುತ || (1)      

ಸಂಸಾರದ ಬೇಗೆ ಬಿಡಿಸಿ ನಮ್ಮನು ಸಲಹುವ |

ಕೃಷ್ಣನ ಕೃಪೆಯ ನಮಗೆ ಕರುಣಿಸುವ |

ಒಲಿದು ಬರುವ ಬೇಡಿದ್ದು ಕೊಡುವ |

ಶಾಂತ ಮೂರ್ತಿ ರಾಘವೇಂದ್ರ ||  (2)  

ಅವನ ಅಂಗಳದಲ್ಲಿ ಆಟ ಆಡುವ |

ನಿತ್ಯ ನಡೆಯುವ ರಥೋತ್ಸವ ನೋಡುವಾ |

ಹೊತ್ತು ಹೊತ್ತಿಗೆ ತುತ್ತು ನೀಡುವಾ |

ಅನ್ನದ ಚಿಂತೆ ದೂರ ಮಾಡುವ ||  (3)

ಶೇಷ ಶಯನನ ಭಜಿಸುತ ವೃಂದಾವನದಿ |

ಕುಳಿತ ಗುರುವೇ ನಿನಗೆ ಶರಣ ಎನ್ನಿ |

ಭಜಿಪ ಜನರ ಭವಣೆ ಬಿಡಿಸಲು |

ಜಾಹ್ನವಿ ವಿಠಲನ ಪ್ರಿಯ ತೋರುವಾ ||  (4)