ಮನೆ ದೇವರ ನಾಮ ನಂಬಿ ಬಂದೆ ನಿನ್ನ ಚರಣ

ನಂಬಿ ಬಂದೆ ನಿನ್ನ ಚರಣ

0

ನಂಬಿ ಬಂದೆ ನಿನ್ನ ಚರಣ.

ಗುರುರಾಯ ಯಾರಿಲ್ಲ ನಿನ್ನಂತಹ ಕರುಣಾ (ಪ)

ದೂರ ಮಾಡದಲೆ ಸಲಹೊ ರಾಯ |

ನೀನೇ ನನ್ನ ಜಿಯಾ |

ನಿನಗಾಗಿ ಇದೆ ನನ್ನ ದೇಹಾ, |

ದುಡಿಸೋ ನಿ ಮಹನೀಯಾ ||

ನಂಬಿ ಬಂದೆ ನಿನ್ನ ಚರಣ…. (1)

ಕಂದ ಚಿಕ್ಕವಳೆಂದು ತಿಳಿದು, ತಾಯಿ ಪ್ರೀತಿಯಂತೆ,

ಮುಂದಕ್ಕೆ ಕರೆಯೋ… ಗುರು ರಾಯ |

ಸಕಲವನ್ನು ನೀಡುವ ದೊರೆಯೇ |

ನಾ ಓಡೋಡಿ ಬಂದೆ ಪ್ರಭುವೆ ||

ನಂಬಿ ಬಂದೆ ನಿನ್ನ ಚರಣ…. (2)

ಬಳಲುತಲಿಹೆ ಭವ ಸಾಗರದಿ |

ದಾಟಿಸೋ ಕರುಣದಿ ಕೈ ಪಿಡಿದು |

ಹೇಸಿ ಜೀವನವ ಸಾಕೋ….ರಾಯ |

ಜಹ್ನವಿ ವಿಠಲನ ತೋರೋ ರಾಘವೇಂದ್ರ ||

ನಂಬಿ ಬಂದೆ ನಿನ್ನ ಚರಣ (3)