ಮನೆ ಕ್ರೀಡೆ ವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ ಘೋಷಣೆ

ವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ ಘೋಷಣೆ

0

ಆಸ್ಟ್ರೇಲಿಯಾ ಓಪನ್ ನಲ್ಲಿ ಆಡುತ್ತಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದು,  ಇದು ನನ್ನ ಕೊನೆಯ ಸೀಸನ್ ಎಂದು ಘೋಷಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ ಕುರಿತಾಗಿ ಮಾತನಾಡಿದ್ದರು. ಇದು ನನ್ನ ಕೊನೆಯ ಆವೃತ್ತಿ ಎಂದು ನಿರ್ಧರಿಸಿದ್ದೇನೆ. ನಾನು ಈ ಆವೃತ್ತಿಯನ್ನು ಹೇಗೆ ಕೊನೆಗೊಳಿಸುತ್ತೇನೆ ಎಂದು ಗೊತ್ತಿಲ್ಲ. 

ನನ್ನ ದೇಹ ನನಗೆ ಸಹಕರಿಸುತ್ತಿಲ್ಲ. ದಿನದಿಂದ ದಿನಕ್ಕೆ ದೇಹವು ಕ್ಷೀಣಿಸುತ್ತಿದೆ. ನನ್ನ ಮೊಣಕಾಲಿನ ನೋವು ಜಾಸ್ತಿಯಾಗುತ್ತಿದೆ. ಇದರಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಹೀಗಾಗಿ ಇಲ್ಲಿಗೆ ನನ್ನ ವೃತ್ತಿ ಬದುಕು ಅಂತ್ಯಗೊಳಿಸುವುದು ಉತ್ತಮ ಎಂಬ ಯೋಚನೆ ಬಂದಿದೆ ಎಂದು ಹೇಳಿದ್ದಾರೆ. 

ಸಾನಿಯಾ ಮಿರ್ಜಾ 2013ರಲ್ಲಿ ಸಿಂಗಲ್ಸ್ ಆಡುವುದರಿಂದ ಹಿಂದೆ ಸರಿದಿದ್ದರು. ಅಂದಿನಿಂದ ಅವರು ಡಬಲ್ಸ್ ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದರು. 2018ರಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಅವರು ಕೆಲ ಕಾಲ ಆಟದಿಂದ ದೂರ ಉಳಿದಿದ್ದರು. ನಂತರ ಉಕ್ರೇನಿನ ನಾಡಿಯಾ ಕಿಚೆನೊಕ್ ಅವರೊಂದಿಗೆ ಹೋಬರ್ಟ್ ಇಂಟರ್ ನ್ಯಾಷನಲ್ ನಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. 

ಸಾನಿಯಾ ಮಿರ್ಜಾ ಸುಮಾರು 91 ವಾರಗಳ ಕಾಲ ಡಬಲ್ಸ್ ನಲ್ಲಿ ನಂಬರ್ ಒನ್ ಆಗಿ ಉಳಿದಿದ್ದರು. 2015ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸಾನಿಯಾ ಸತತ 44 ಪಂದ್ಯಗಳನ್ನು ಗೆದ್ದಿದ್ದರು. 

ಹಿಂದಿನ ಲೇಖನಇಂದಿನ ದಿನ ಭವಿಷ್ಯ
ಮುಂದಿನ ಲೇಖನಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಆಂಡಿ ಮರ್ರೆ ಹೊರಕ್ಕೆ