ಬಂದೆ ನಾನು ಗುರುವೆ, ನಿನ್ನ ಸೇವೆ ಮಾಡಲೆಂದು.
ನಿತ್ಯ ಸಂಕಲ್ಪದಿ ನಿನ್ನ ಸುತ್ತಿಸಿ, ಧನ್ಯಳಾಗಲೆಂದು. (ಪ)
ಭವಸಾಗರದ ಭಾವದ ಕಡಲ ನೀನು ಈಜಿಸೆಂದು.
ನಿತ್ಯ ತುಷ್ಟಳಾಗಿರುವ ಹರಸು ನೀನು ಇಂದು.
ಹರಿಯ ಚರಣವ ಭಜಿಸಲು ಪ್ರೇರಿಸು ಎಂದೆಂದೂ.!! (1)
ನಿನ್ನೆಯ ಚಿಂತೆ ನಾನು ಮಾಡಬಾರದು ಎಂದೆಂದೂ,
ನಾಳೆ ಹೇಗೆ ? ಎನ್ನುವ ಚಿಂತೆ ಮಾಡದೆ ಮುಂದೆಂದು
ಸದ್ಗುಣಿಯಾಗಿ ಬಾಳಲು ನಿನ್ನ ಕರುಣೆ ಇರಲೆಂದು (2)
ಸಂತಸದಿ ಶ್ರೀಹರಿಯ ನಾಮ ಸ್ಮರಣೆ ಮಾಡಿಸು ಎನಗಿಂದು
ಜಹ್ನವಿ ವಿಠಲನ ತೋರಿಸು ನೀನಿಂದು (3)















