ಮನೆ ಸುದ್ದಿ ಜಾಲ ಕಿತವಾಡ ಫಾಲ್ಸ್‌’ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಸಾವು

ಕಿತವಾಡ ಫಾಲ್ಸ್‌’ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಸಾವು

0

ಬೆಳಗಾವಿ: ಕಿತವಾಡ ಫಾಲ್ಸ್‌’ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20) ಮತ್ತು ತಸ್ಮಿಯಾ(20) ಮೃತ ಯುವತಿಯರು ಎಂದು ತಿಳಿದು ಬಂದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಿತವಾಡ ಫಾಲ್ಸ್ ಇದಾಗಿದ್ದು, ಬೆಳಗಾವಿಯಿಂದ 40 ಯುವತಿಯರು ಟ್ರಿಪ್‌ಗೆ ತೆರಳಿದ್ದರು.

ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಕಾಲು ಜಾರಿ ಬಿದ್ದಿದ್ದಾರೆ. ಐವರು ಯುವತಿಯರ ಪೈಕಿ ನಾಲ್ವರ ಮೃತಪಟ್ಟಿದ್ದು, ಓರ್ವಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಸದ್ಯ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಬಿಮ್ಸ್ ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ.

ಹಿಂದಿನ ಲೇಖನಮಂಗಳೂರು: ಪಾರ್ಕ್ ಮಾಡಿದ್ದ ಕಾರಿನಲ್ಲಿ ಬೆಂಕಿ- ಕೆಲಕಾಲ ಆತಂಕ
ಮುಂದಿನ ಲೇಖನಸಾಂಸ್ಕೃತಿಕ ನಗರಿಯನ್ನು ಬೇರೆ ಬೇರೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಅಡ್ಡಂಡ ಕಾರ್ಯಪ್ಪ: ಹೆಚ್.ವಿಶ್ವನಾಥ್ ಆರೋಪ