ಮನೆ ದೇವರ ನಾಮ ಹೇ ಗುರುವೆ

ಹೇ ಗುರುವೆ

0

ಹೇ ಗುರುವೆ ಬಾರೋ ಪ್ರಭುವೇ

ಹೇ ವಿಭುವೆ ತೋರೋ ದಯವೇ || ಪ

ಅಂಧಕಾರದಲ್ಲಿ ಜೀವ ಬೇಯುತ್ತಿದೆ

ಅಂಧತ್ವದಲ್ಲಿ ದಾರಿ ಸಾಗುತಿದೆ

ಗೊತ್ತಿಲ್ಲದ ಗುರಿ ಇಲ್ಲದೆ ಹೊತ್ತು….

ಮತ್ತಿನಲ್ಲಿ ದಿನ ಕಳೆಯುತಿದೆ || 1

ನಿಮ್ಮ ಅಂತಃಕರುಣದ ಜ್ಯೋತಿ

ನಮಗಾಗಿರಲಿ ದಾರಿ ಬೆಳಗೋ ಜ್ಯೋತಿ

ಸತ್ಯ ಮಾರ್ಗದಲ್ಲಿ ನಮ್ಮನ್ನು ನಡೆಸು

ನಿತ್ಯ ನಿನ್ನ ದರುಶನವ ಕರುಣಿಸು || 2

ಪ್ರಭು ನಿನ್ನ ಶಕ್ತಿಯಲಿ ಎಲ್ಲ ಇಹುದು

ಗುರು ನೀನೋಬ್ಬನೇ ಸತತ ಸಲಹುವದು

ರಾಘವೇಂದ್ರ ಗುರುವೇ ನಿನ್ನ ಮಹಿಮೆ

ತೋರಿಸೋ ಜಾಹ್ನವಿ ವಿಠಲನ ಒಲುಮೆ || 3