ಇದ್ದಾರೆ, ಗುರು ಇದ್ದಾರೆ, |
ವರಮಂತ್ರಾಲಯದಲ್ಲಿ ರಾಘವೇಂದ್ರರು ಇದ್ದಾರೆ |
ಇದ್ದಾರೆ, ಹುರು ಇದ್ದಾರೆ || ಪ
ಸುದೀಂದ್ರ ಕರಸಂಜಾತರು ರಾಘವೇಂದ್ರರು |
ಮೂಲರಾಮನ ಪೂಜೆಯ ಮಾಡುತ |
ಚಂದದ ಬೃಂದಾವನದೊಳು |
ಆನಂದದಲಿ ಇದ್ದಾರೆ || 1
ಭಾವ ಭಕ್ತಿಯಿಂದ ಬರುವ ಭಕ್ತರಿಗೆ |
ಒಲಿದು ಬಂದು ದರಿಶನವ ಕೊಡುತಾ |
ಪೊಂಗಳಲೂದವ ಚಲುವ ಕೃಷ್ಣನ |
ಜೊತೆಯಲಿ ಬೃಂದಾವನದೊಳು ಇದ್ದಾರೆ || 2
ಮಂಚಾಲೆಮ್ಮನ ಮಗನಾಗಿ |
ಬೇಡಿದ್ದು ಕೊಡುವ ಕಾಮಧೇನುವಾಗಿ |
ಕಲ್ಪತರು ಗುರುರಾಘವೇಂದ್ರರು |
ಜಾಹ್ನವಿ ವಿಠ್ಠಲನ ಸೇವಿಸುತ ವರ ಮಂತ್ರಾಲಯದಲ್ಲಿದ್ದಾರೆ || 3














