ಮನೆ ಆರೋಗ್ಯ ತೂಕ ಕಡಿಮೆ ಮಾಡಿಕೊಳ್ಳುವುದು

ತೂಕ ಕಡಿಮೆ ಮಾಡಿಕೊಳ್ಳುವುದು

0

 • ಕೊಬ್ಬು ಕಡಿಮೆ ಮಾಡಿಕೊಳ್ಳಬೇಕು. ಏಕೆಂದರೆ ಆಹಾರದಲ್ಲಿರುವ ಕೊಬ್ಬಿನಂಶ ನೇರವಾಗಿ ನಮ್ಮ ಶರೀರದ ಕಣಗಳೊಳಗೆ ಸೇರಿಕೊಳ್ಳುತ್ತದೆ. ಆದರೆ ಕಾರ್ಬೋಹೈಡ್ರೇಟ್, ಪ್ರೋಟೀನ್ಗಳು ಹಾಗಲ್ಲ. ಶರೀರದೊಳಗೆ ಕೊಬ್ಬಾಗಿ ಅಷ್ಟು ಸುಲಭವಾಗಿ ಮಾರ್ಪಾಟಾಗುವುದಿಲ್ಲ.
 • ಕೊಬ್ಬಿನಾಂಶ ಕಡಿಮೆ ಇದ್ದು, ಕ್ಯಾಲೋರಿ ಜಾಸ್ತಿಯಿರುವ ಆಹಾರವನ್ನು ತೆಗೆದುಕೊಂಡರೂ, ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
 • ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಗಳಿಗಿಂತ, ಕೊಬ್ಬಿನಲ್ಲಿ ಎರಡರಷ್ಟು ಕ್ಯಾಲರಿಗಳಿವೆ. ಅಂದರೆ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಗಳನ್ನು ಸೇವಿಸಿದರೆ ಒಳ್ಳೆಯದು. ಕೊಬ್ಬನ್ನು ಮಾತ್ರ ಕಡಿಮೆ ಸೇವಿಸಬೇಕು.
  ಸ್ತ್ರೀ – ಪುರುಷರ ದೇಹದ ಕೊಬ್ಬಿನ ಕಣಗಳಲ್ಲಿ ವ್ಯತ್ಯಾಸವಿರುತ್ತದೆಯೇ ? :-
 • ಮೈಕ್ರೋಸ್ಕೋಪಿ ನಲ್ಲಿ ನೋಡಿದಾಗ ಸ್ತ್ರೀ ಪುರುಷರ ದೇಹದ ಕೊಬ್ಬಿನ ಕಣಗಳು ಒಂದೇ ರೀತಿಯಾಗಿ ಕಾಣಿಸುತ್ತದೆ. ಆದರೆ ಅವರವರ ಶರೀರದೊಳಗೆ, ಬೇರೆ ಬೇರೆಯಾದ ಹಾರ್ಮೋನುಗಳು ಮತ್ತು ಎಂಜೈಮ್ ಪ್ರಭಾವಕ್ಕೆ ಒಳಗಾಗುತ್ತಾರೆ.
 • ಸ್ತ್ರೀಯರಿಗೆ ತೊಡೆಗಳಲ್ಲಿ ಮತ್ತು ಸೊಂಟ ಭಾಗದಲ್ಲಿ ಕೊಬ್ಬಿನಾಂಶವು ಅಧಿಕವಾಗಿರುತ್ತದೆ. ಪುರುಷರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಶೇಖರವಾಗಿರುತ್ತದೆ.
 • ಹೆಂಗಸರಲ್ಲಿ ವಯಸ್ಸಿಗೆ ಬರುವತನಕ ಕೊಬ್ಬಿನ ಕಣಗಳು ಕಾಲಿನ ಹಿಂಭಾಗದಲ್ಲೂ, ತೊಡೆಗಳಲ್ಲು ಶೇಖರವಾಗಿರುತ್ತದೆ. ಆನಂತರ ಅವರಲ್ಲಿ ಈಸ್ಟ್ರೋಜಿನ್, ಪ್ರೋಜೆಸ್ಟೆರೋನ್ ಹಾರ್ಮೋನ್ ಉತ್ಪತ್ತಿ ಕುಂಠಿತವಾಗಿ ಹೊಟ್ಟೆ ಬೆನ್ನಿನಲ್ಲಿ ಶೇಖರವಾಗುತ್ತದೆ.
 • ಪುರುಷರು ವಯಸ್ಸಿನಲ್ಲಿದ್ದಾಗ ಅವರಲ್ಲಿ ಉತ್ಪತ್ತಿಯಾಗುವ ಟಿಸ್ಟೋಸ್ಟೆರಾನ್ ಎಂಬ ಪುರುಷ ಸೆಕ್ಸ್ ಹಾರ್ಮೋನ್, ಹೊಟ್ಟೆಯಲ್ಲಿರುವ ಕೊಬ್ಬು ನಿವಾರಿಸಲು ಸಹಕರಿಸುತ್ತದೆ. ಅವರು ಯುದ್ಧಕ್ಕೆ ವಾಲಿದಾಗ ಟೆಸ್ಟೋಸ್ಟೆರೋನ್ ಉತ್ಪತ್ತಿ ಕಡಿಮೆಯಾಗಿ, ಕೊಬ್ಬು ನಿರ್ಮೂಲನ ಕಾರ್ಯ ನಿಂತುಹೋಗಿ ದಪ್ಪವಾಗಲು ಪ್ರಾರಂಭಿಸುತ್ತಾರೆ.
  ವ್ಯಕ್ತಿಯ ತೂಕ ಎಷ್ಟಿರಬೇಕು ?
 • ವ್ಯಕ್ತಿಯ ತೂಕ ಒಂದು ಸಮಸ್ಯೆ ಅಲ್ಲ. ಆದರೆ ಅವನಲ್ಲಿ ಕೊಬ್ಬು ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬುದು ಮುಖ್ಯ.
 • ಮಾನವನ ದೇಹದಲ್ಲಿ ಮಾಂಸ ಖಂಡಗಳು ಕೊಬ್ಬಿಗಿಂತ ಹೆಚ್ಚು ತೂಕವಿರುತ್ತದೆ. ವ್ಯಾಯಾಮ, ಯೋಗ ಮಾಡುತ್ತಾ ಫಿಟ್ ಆಗಿದಷ್ಟು ಹೆಚ್ಚಿರುತ್ತದೆ. ಆದರೆ ಕೊಬ್ಬು ಕರಗುತ್ತಿರುತ್ತದೆ. ಇದು ಆರೋಗ್ಯಕರ ಬೆಳವಣಿಗೆ.
 • ದೇಹದಲ್ಲಿ ಎಷ್ಟು ಕೊಬ್ಬಿದೆ ಎನ್ನುವುದಕ್ಕಿಂತ, ಅದು ಎಲ್ಲಿ ಶೇಖರವಾಗಿದೆ ಎಂಬುದು ಮುಖ್ಯ. ಹೊಟ್ಟೆಯ ಮೇಲೆ ಹೆಚ್ಚು ಕೊಬ್ಬು ಶೇಖರವಾಗಿದ್ದರೆ, ಹೈ ರಿಸ್ಕ್ ನಲ್ಲಿ ಇದ್ದಿರೆಂದೇ ಅರ್ಥ ೧ ಪರಿಣಾಮವಾಗಿ ಹೃದ್ರೋಗಗಳು, ಗರ್ಭಾಶಯ, ಸ್ತನ ಕ್ಯಾನ್ಸರ್, ಮಧುಮೇಹ, ಚಿಕ್ಕವಯಸ್ಸಿನಲ್ಲಿ ಮರಣ ಸಂಭವಿಸುವುದು, ಇಂತಹ ಅಪಾಯಗಳು ಉಂಟಾಗಬಹುದು.
 • ಸ್ತ್ರೀಯರು ತಮ್ಮ ಹೊಟ್ಟೆಯ ಸುತ್ತಳತೆಯನ್ನು ನೋಡಿಕೊಳ್ಳುವುದರ ಮೂಲಕ ಅವರ ಶರೀರದ ಕೊಬ್ಬಿನ ಪ್ರಮಾಣವನ್ನು ತಿಳಿಯಬಹುದು. ಯಾರಿಗೆ 39 ಅಗಲಕ್ಕಿಂತ ಜಾಸ್ತಿ ಸೊಂಟದ ಸುತ್ತಳತೆ ಇದೆಯೋ ಅವರು Risky zone (ಅಪಾಯ) ತಿಳಿದುಕೊಳ್ಳಬಹುದು. ಅಂತಹವರು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಎಷ್ಟಿದೆ, ಲಿಪಿಡ್ಸ್, ಗ್ಲುಕೋಸ್ ಟೆಸ್ಟ್ ಗಳನ್ನು ಮಾಡಿಸಬೇಕು. ಡಯಾಬಿಟಿಸ್ ಇದೆ ಎಂಬುದನ್ನ ತಿಳಿದುಕೊಳ್ಳಬೇಕು.
 • ಒಂದು ವೇಳೆ ರಿಸಲ್ಟ್ ನಾರ್ಮಲ್ ರೆಂಜಿನಲ್ಲಿದ್ದರೂ, ಮುಂದೆ ರೋಗಗಳು ಬಾರದಿರುವಂತೆ ದೇಹದ ಕೊಬ್ಬಿನಂಶವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಹಿಂದಿನ ಲೇಖನಧ್ರುವ ಚರಿತ್ರೆ
ಮುಂದಿನ ಲೇಖನಇದ್ದಾರೆ ಗುರು..