ನಿಲ್ಲಿಸಬೇಕಯ್ಯಾ ಕೃಷ್ಣಾ ಎನ್ನಯ ಮನದೊಳಗೆ
ನಿನ್ನಯ ಸುಂದರ ಮೂರುತಿ || ಪ
ಅತ್ತ, ಇತ್ತ, ಎತ್ತ ಹೋಗದಂತೆ ಮನ
ನಿನ್ನತ್ತ ಚಿತ್ತವಿರುವಂತೆ ಕೃಷ್ಣಾ || ಅ ಪ
ವಿಧದ ಯೋಚನೆಗಳ ಹೊರಲಾರೆ
ಮುದದಿ ನಿನ್ನ ನೆನೆಯದೆ ಇರಲಾರೆ
ಜಗದೀಶ ನನ್ನಲೂಮೆಯಲಿ ಮೈ ಮರೆಯುವೆ
ಜಗದಿ ಧನ್ಯಳಾಗಿ ನಾ ಬಾಳುವೆ
ನಿಲ್ಲಿಸಬೇಕಯ್ಯಾ ಕೃಷ್ಣಾ…. || 1
ಎಸು ಜನುಮಗಳ ಪುಣ್ಯದ ಫಲವೋ
ಹೊಸ ದಾರಿಯಲಿ ನೀ ನಡೆಸುತ್ತಿರುವೆಯೋ
ಮನವಿದು ನಿನ್ನ ವಶವಾಗಿರಲಿ….
ದಿನವೆಲ್ಲ ನಿನ್ನ ಸ್ಮರಣೆಯಲ್ಲಿ ತೊಡಗಿರಲಿ
ನಿಲ್ಲಿಸಬೇಕಯ್ಯಾ ಕೃಷ್ಣ …. || 2
ನಿನ್ನ ಬಲವೊಂದೆ ಬದುಕಿಗೆ ಸಾಕು
ನಿನ್ನ ಕೃಪೆಯೊಂದೇ ಸದಾ ಬೇಕು
ನಾಗಶಯನ ನಿನ್ನ ನಾ ಹಾಡಿ ಕೊಂಡಾಡಬೇಕು
ನಗುತ ಜಹ್ನವಿ ವಿಠಲನ ಸದಾ ಎನ್ನ ಹೃದಯದಲ್ಲಿರಬೇಕು.
ನಿಲ್ಲಿಸಬೇಕಯ್ಯಾ ಕೃಷ್ಣ…. || 3