ಮನೆ ದೇವರ ನಾಮ ನಿಲ್ಲಿಸಬೇಕಯ್ಯಾ ಕೃಷ್ಣಾ

ನಿಲ್ಲಿಸಬೇಕಯ್ಯಾ ಕೃಷ್ಣಾ

0

ನಿಲ್ಲಿಸಬೇಕಯ್ಯಾ ಕೃಷ್ಣಾ ಎನ್ನಯ ಮನದೊಳಗೆ

ನಿನ್ನಯ ಸುಂದರ ಮೂರುತಿ || ಪ

ಅತ್ತ, ಇತ್ತ, ಎತ್ತ ಹೋಗದಂತೆ ಮನ

ನಿನ್ನತ್ತ ಚಿತ್ತವಿರುವಂತೆ ಕೃಷ್ಣಾ || ಅ ಪ

ವಿಧದ ಯೋಚನೆಗಳ ಹೊರಲಾರೆ

ಮುದದಿ ನಿನ್ನ ನೆನೆಯದೆ ಇರಲಾರೆ

ಜಗದೀಶ ನನ್ನಲೂಮೆಯಲಿ ಮೈ ಮರೆಯುವೆ

ಜಗದಿ ಧನ್ಯಳಾಗಿ ನಾ ಬಾಳುವೆ

ನಿಲ್ಲಿಸಬೇಕಯ್ಯಾ ಕೃಷ್ಣಾ…. || 1

ಎಸು ಜನುಮಗಳ ಪುಣ್ಯದ ಫಲವೋ

ಹೊಸ ದಾರಿಯಲಿ ನೀ ನಡೆಸುತ್ತಿರುವೆಯೋ

ಮನವಿದು ನಿನ್ನ ವಶವಾಗಿರಲಿ….

ದಿನವೆಲ್ಲ ನಿನ್ನ ಸ್ಮರಣೆಯಲ್ಲಿ ತೊಡಗಿರಲಿ

ನಿಲ್ಲಿಸಬೇಕಯ್ಯಾ ಕೃಷ್ಣ …. || 2

ನಿನ್ನ ಬಲವೊಂದೆ ಬದುಕಿಗೆ ಸಾಕು

ನಿನ್ನ ಕೃಪೆಯೊಂದೇ ಸದಾ ಬೇಕು

ನಾಗಶಯನ ನಿನ್ನ ನಾ ಹಾಡಿ ಕೊಂಡಾಡಬೇಕು

ನಗುತ ಜಹ್ನವಿ ವಿಠಲನ ಸದಾ ಎನ್ನ ಹೃದಯದಲ್ಲಿರಬೇಕು.

ನಿಲ್ಲಿಸಬೇಕಯ್ಯಾ ಕೃಷ್ಣ…. || 3

ಹಿಂದಿನ ಲೇಖನಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಗೆ ದರ ನಿಗದಿ: ಡಾ ಕೆ.ವಿ.ರಾಜೇಂದ್ರ
ಮುಂದಿನ ಲೇಖನಹಾಸ್ಯ