ನಿನ್ನ ಸ್ಮರಣೆಯೆ ಶಿವನ ಮಂತ್ರದಂತೆ |
ಸಿದ್ದಲಿಂಗೇಶ್ವರ ಸಿದ್ದಲಿಂಗೇಶ್ವರ ||
ಎಂದಾಗ ಬದುಕು ಸಾರ್ಥಕವಾದಂತೆ ||ನಿನ್ನ||
ಮಣ್ಣೆಲ್ಲ ಮೃತ್ತಿಗೆಯು ಕಲ್ಲೆಲ್ಲ ಪರುಷಮಣಿ
ಪಾದ ಸೋಕಿದಾಗ ನಿನ್ನ ಪಾದ ಸೋಕಿದಾಗ ||
ನದಿಯೆಲ್ಲ ಗಂಗೆಯಂತೆ ಹನಿಯು ತೀರ್ಥದಂತೆ ||
ಕರವು ಸೋಕಿದಾಗ ನಿನ್ನ ಕರವು ಸೋಕಿದಾಗ ||ನಿನ್ನ ||
ಕಾಡಾಗಲಿ ನಾಡಗಲಿ ಕೈಲಾಸ ವಾಗುವುದು
ನೀನು ನೆಲೆಸಿದಾಗ ಅಲ್ಲಿ ನೀನು ನೆಲೆಸಿದಾಗ ||
ಹರನನ್ನು ನಂಬದವ ಶಿವನನ್ನು ಕಾಣುವನು ||
ನೀನು ಹರಿಸಿದಾಗ ತಂದೆ ನೀನು ಹರಸಿದಾಗ |ನಿನ್ನ