ಮನೆ ದೇವರ ನಾಮ ಯೋಗ ಮುದ್ರೆಯ ಭದ್ರ

ಯೋಗ ಮುದ್ರೆಯ ಭದ್ರ

0

ಯೋಗ ಮುದ್ರೆಯ ಭದ್ರ ಮೂರ್ತಿಯ ||
ಈ ಅಂದ ನೋಡಿ ಬನ್ನೀ ||
ಧರ್ಮಶಾಸ್ತ್ರನ ಸನ್ನಿಧಾನಕ್ಕೆ ||
ಆ ಹರಕೆ ಎಲ್ಲಾ ತನ್ನಿ || ಯೋಗ ||

ಹತ್ತಲು ಮೆಟ್ಟಿಲು ಹದಿನೆಂಟು
ಅದರಲ್ಲಿ ಅರ್ಥ ನೂರುಂಟು ||
ನಮ್ಮ ಪುರಾಣ ಹದಿನೆಂಟು ||
ಅದರಾಚೆ ಇದರ ಈ ಗುಟ್ಟು ||ಯೋಗ ||

ಶಬರಿ ಬೆಟ್ಟದ ಕೊನೆಯಲ್ಲಿ
ಕುಳಿತಿಹ ಮಾರುತಿ ಪ್ರಭ ಚೆಲ್ಲಿ ||
ಭಕ್ತರ ಬಂಧು ಅಯ್ಯಪ್ಪ ||
ಪ್ರೇಮದ ಸಿಂಧು ನಮ್ಮಪ್ಪ ||ಯೋಗ ||

ಸ್ವಾಮಿಯೇ ಶರಣಂ ಅಯ್ಯಪ್ಪ
ಕರುಣಾ ಮೂರ್ತಿಯೇ ಅಯ್ಯಪ್ಪ ||
ಭಕ್ತ ವತ್ಸಲ ಅಯ್ಯಪ್ಪ ||
ಭಾಗ್ಯನಿಧಿಯೆ ನಿನ್ನಪ್ಪ|| ಯೋಗ ||

ಹಿಂದಿನ ಲೇಖನಮಧುಗಿರಿಯಲ್ಲೂ ಪಾವಗಡ ಮಾದರಿ ಸೋಲಾರ್ ಪಾರ್ಕ್: ಕೆ.ಜೆ.ಜಾರ್ಜ್
ಮುಂದಿನ ಲೇಖನಕಜ್ಜಿ, ತುರಿ