ಶ್ರೀದೇವಿ ನಿಮ್ಮಮ್ಮ ಮೂಕಾಂಬಿಕೆ ನೂರಾರು ನಮಸ್ಕಾರ ಸಿರಿ ಪಾದಕೆ||
ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ ||
ನೀನಗಾರು ಸರಿ ಸಾಟಿ ಮುಲ್ಲೋಕದಲ್ಲಿ || ಶ್ರೀದೇವಿ||
ಜಯದೇವಿ ಜಯ ಜನನಿ ಜಗ ನಾಯಕಿ
ಜಯ ವಿಜಯ ನೀ ನೀಡು ಜಗದ್ ರಕ್ಷಕಿ ||
ಕೊಳಚಾದ್ರಿ ಇಂದುಳಿದ ಕರುಣಾಮಯಿ ||
ಕೊಲ್ಲೂರಿನಲ್ಲಿರುವ ಮಮತಾಮಾಯಿ || ಶ್ರೀದೇವಿ||
ಚಾಮುಂಡಿ ನೀನೇ ಮಲಕುಮಿ ನೀನೆ
ಶೃಂಗೇರಿಯಲ್ಲಿರುವ ಶಾರದೆಯು ನೀನೆ ||
ಶ್ರೀ ಶಂಕರಾಚಾರ್ಯರ ಆರಾಧ್ಯ ದೇವಿ ||
ಶ್ರೀ ಶಕ್ತಿ ನೀನೆ ಏ ದೇವ ದೇವಿ || ಶ್ರೀ ದೇವಿ ||
ಆನಂದ ಸುಧೆಯಲ್ಲಿ ಮೀಸುತ ಜಗವ
ನೀ ತರುವೆ ಅಂಬೆ ಪರಮ ಪದವಿ ಭವ ||
ಮಣಿದ್ವೀಪದಲ್ಲಿರುವ ಮಹಾದೇವಿ ಶರಣು
ಮನದ ಮಂದಾರವ ಅರ್ಪಿಸುವೆ ನಾನು
ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ ಶ್ರೀದೇವಿ