ಮನೆ ರಾಜ್ಯ ತುಮಕೂರು: ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ

ತುಮಕೂರು: ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ

0

ತುಮಕೂರು(Tumkur): ಜಿಲ್ಲೆಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಇಂದು ಮುಂಜಾನೆ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಇಬ್ಬರು ಬಾಲಕರ ಮೇಲೆ ಚಿರತೆ ದಾಳಿ ಮಾಡಿದೆ.

ಬೆಳಗ್ಗೆ ಹಸುವಿನ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ. ಕೂಡಲೇ  ಬಾಲಕರನ್ನು ತುಮಕೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಕೆಲ ತಿಂಗಳ ಹಿಂದೆ ಇದೇ ತಾಲೂಕಿನ ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರಗಾನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಕರುವೊಂದು ಸಾವನ್ನಪ್ಪಿತ್ತು.

ಹಿಂದಿನ ಲೇಖನಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು
ಮುಂದಿನ ಲೇಖನಇತರೆ ಸಮುದಾಯಗಳ ಕನಿಷ್ಠ ಮದುವೆ ವಯೋಮಿತಿಯನ್ನೇ ಮುಸ್ಲಿಂ ಸಮುದಾಯಕ್ಕೆ ಅನ್ವಯಿಸಲು ಕೋರಿ ಸುಪ್ರೀಂ ಮೊರೆಹೋದ ಮಹಿಳಾ ಆಯೋಗ