ಮನೆ ದೇವರ ನಾಮ ಸೇವಕನ ಮಾಡು ಸೇವಕನ

ಸೇವಕನ ಮಾಡು ಸೇವಕನ

0

 ಮಾರುತೀ ಸೇವಕನ ಮಾಡು ಸೇವಕನ ಮಾಡು |

 ಮಾರುತೀ ಸೇವಕನ ಮಾಡು ||

 ನಿನ್ನಂತೆ ನನ್ನಾ ಸೇವಕನ ಮಾಡು ||

 ರಾಮಚಂದ್ರನ ಸೇವಿಸಿ ಪೂಜಿಸಿ||

 ಧನ್ಯನಾಗುವಂತೆ ಹರಸಿ ನನ್ನಾ ||2 ||  || ಸೇವಕನ ||

 ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೆ ಇಲ್ಲಾ|

 ಸೇವೆಯು ನೀಡುವ ಮಹಾದಾನಂದ ಬಣ್ಣಿಸೆ ಮಾತುಗಳಿಲ್ಲಾ |

ಸೇವೆಯು ಕೊಡುವ ಫಲದ ಕಲ್ಪನೆ|

 ಕಲ್ಪರುಕ್ಷಕು ಇಲ್ಲಾ || ಸೇವಕನ ||

 ಸೇವಕನೆಂದೆ ನಂದಿಗೆ ದೊರಕಿತು ಕೈಲಾಸದಲ್ಲಿ ಸ್ಥಾನ |

 ಸೇವಕನಾಗಿ ಗರುಡನು ಪಡೆದ ವೈಕುಂಠದಲ್ಲಿ ತಾಣ |

 ಸೇವಕನಾದರೆ ನನ್ನಲ್ಲಿ ಆಗ ||

 ಕರಗುವುದು ಅಜ್ಞಾನ || ಸೇವಕನ ||

 ಸೇವಕನಾಗಿ ಎಲ್ಲಾ ಶಕ್ತಿಯು ನಿನ್ನ ಕೈ ಸೇರಿತು ಹನುಮಾ |

 ಪೂಜೆಯ ಹೊಂದುವ ಭಾಗ್ಯ ನೀಡಿತು ನೀನಾಗರಾಮ ನಾಮ |

 ನನ್ನೀ ಜನುಮವು ಸಾರ್ಥಕ ತಂದೆ ||

 ಪಡೆದರೆ ನಿನ್ನ ಪ್ರೇಮಾ || ಸೇವಕನ ||