ಮನೆ ಕಾನೂನು ಹಿಜಾಬ್ ವಿವಾದ: ಇಂದು ಮಧ್ಯಾಹ್ನ ಹೈ ಕೋರ್ಟ್ ನಲ್ಲಿ ವಿಚಾರಣೆ

ಹಿಜಾಬ್ ವಿವಾದ: ಇಂದು ಮಧ್ಯಾಹ್ನ ಹೈ ಕೋರ್ಟ್ ನಲ್ಲಿ ವಿಚಾರಣೆ

0

ಬೆಂಗಳೂರು: ಹಿಜಾಬ್ –ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ ಹೈಕೋರ್ಟ್ ನ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ9 ಮತ್ತು 10ನೇ ತರಗತಿ ಹೈಸ್ಕೂಲ್ ಪುನಾರಂಭವಾಗುತ್ತಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಜಾಬ್ ವಿವಾದದ ಕಾರಣದಿಂದಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದು ರಾಜ್ಯ ಸರ್ಕಾರ ಕಳೆದ ವಾರದಿಂದ 9ನೇ ತರಗತಿಯಿಂದ ಹೈಸ್ಕೂಲ್, ಕಾಲೇಜು, ವೃತ್ತಿಪರ ಕೋರ್ಸ್ ಗಳ ಕಾಲೇಜುಗಳಿಗೆ ರಜೆ ಘೋಷಿಸಿತ್ತು. 

ತೀವ್ರ ಕಟ್ಟೆಚ್ಚರಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಹಿಜಾಬ್-ಕೇಸರಿ ಶಾಲು ಕುರಿತು ಮತ್ತೆ ವಿವಾದ ಭುಗಿಲೇಳಬಹುದು ಎಂಬ ಆತಂಕವಿದ್ದು ಹೀಗಾಗಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುವಂತೆ ಸಿಎಂ ಈಗಾಗಲೇ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿರುವ ಶಾಲೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. 

ಶಾಲೆಗಳ ಸುತ್ತಮುತ್ತ ಮಕ್ಕಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಅನಗತ್ಯ ಚರ್ಚೆ, ಪ್ರಚೋದನಾಕಾರಿ ಮಾತುಗಳನ್ನು ಹೊರಗೆ ಓಡಾಡುವಾಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವಂತಿಲ್ಲ ಎಂದು ಪೊಲೀಸರು ಮತ್ತು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

ಹಿಂದಿನ ಲೇಖನಪತಿಗೆ ಪತ್ನಿಯೇ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ
ಮುಂದಿನ ಲೇಖನಇಸ್ರೋದ ಈ ಸಾಲಿನ ಮೊದಲ ಉಡಾವಣೆ ಯಶಸ್ವಿ: ಮೂರು ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52