ಮನೆ ದೇವರ ನಾಮ ನೀನೆಲ್ಲೋ ನಾನಲ್ಲೇ

ನೀನೆಲ್ಲೋ ನಾನಲ್ಲೇ

0

ನೀನೆಲ್ಲೋ ನಾನಲ್ಲೇ |
ಸೇರಿದೆ ಮನವು ನಿನ್ನಲ್ಲೇ ||

ಕಣ್ ಗಳ ತುಂಬಾ ನೀನಿರುವಾಗ |
ಬೇರೆ ನೋಟಕ್ಕೆ ಸ್ಥಳವೆಲ್ಲಿ |
ಹೃದಯದ ತುಂಬಾ ನೀ ತುಂಬಿರಲೂ ||
ಬೇರೆ ಬಯಕೆಗೆ ಎಡೆ ಎಲ್ಲಿ
ನಾಲಿಗೆ ನಿನ್ನ ನಾಮ ಮಾಡುತಿರೇ||
ಬೇರೆ ನುಡಿಗಳು ಇನ್ನೆಲ್ಲಿ||
ಸ್ವಾಮಿಯೇ ಶರಣಂ ಅಯ್ಯಪ್ಪ
ಶರಣ ಸ್ವಾಮಿ ಅಯ್ಯಪ್ಪ||

ಮನಸಿನ ತುಂಬಾ ನೀನಿರುವಾಗ |
ಬೇರೆ ಕನಸುಗಳು ಇನ್ನೆಲ್ಲಿ |
ನಿನ್ನ ಪ್ರೇಮದ ಸಿರಿ ಇರುವಾಗ |
ಬಡತನವೆಂಬ ಮಾತೆಲ್ಲಿ |
ನೀನೇ ನನ್ನವನಾಗಿರುವಾಗ ಹೊೖ|
ನೀನೆ ನನ್ನವನಾಗಿರುವಾಗ ಬೇಡಲು ಏನಿದೆ ನಿನ್ನಲ್ಲಿ |
ನಾ ಬೇಡಲು ಏನಿದೆ ನಿನ್ನಲ್ಲಿ |
ಸ್ವಾಮಿಯೇ ಶರಣಂ ಅಯ್ಯಪ್ಪ |
ಶರಣಂ ಸ್ವಾಮಿಯೇ ಅಯ್ಯಪ್ಪ

ನನ್ನಾ ದೇಹವೆ ದೇವಾಲಯವು
ಹೃದಯವೇ ಪೀಠವು ಅಯ್ಯಪ್ಪ ||
ಹೊಳೆಯುವ ಕಣಾಗಳೆ ಬೆಳಗುವ ದೀಪವು
ಸ್ಮರಣೆಯೆ ಮಂತ್ರವು ನಮ್ಮಪ್ಪ
ನಿನ್ನ ಸ್ಮರಣೆ ಯ ಮಂತ್ರವು ನಮ್ಮಪ್ಪ |
ಉಸಿರಿನ ಉಸಿರು ಪ್ರಾಣದ ಪ್ರಾಣ|
ನೀನಾಗಿರುವೆ ಅಯ್ಯಪ್ಪ ||
ಸ್ವಾಮಿಯೇ ಶರಣಂ ಅಯ್ಯಪ್ಪ
ಶರಣಂ ಸ್ವಾಮಿಯೇ ಅಯ್ಯಪ್ಪ ||ನೀನೆಲ್ಲೊ ||