ಕೊಳಲುದೊ ನಂದನ ಕಂದ
ಮುಕುಂದಾ ಕೊಳಲೂದೊ ನಂದನ ಕಂದ
ಕಾಣದ ಆನಂದ ನೀಡಲು ಗೋವಿಂದ||
ರಾಗದ ಅಲೆಗಳು ಗಾಳಿಯ ಬೆರೆಯಲಿ ||
ಗಾಳಿಯು ಸೋಕಲು ಹೂವುಗಳು ಅರಳಲಿ ||
ಅರಳಿದ ಹೂವುಗಳು ದುಂಬಿಯ ಕರೆಯಲಿ ||
ದುಂಬಿಯು ಮುರಳಿಯ ರಾಗವ ಹಾಡಲಿ || ಕೊಳಲೂದೊ||
ಸುರಿಯುವ ಬಿಸಿಲು ಚಂದ್ರಿಕೆಯಾಗಲಿ ||
ಕಲ್ಲುಗಳೆಲ್ಲ ರತುನಗಳಾಗಲಿ ||
ಸಾಗರವೆಲ್ಲ ಪಾಲ್ಗಡವಾಗಲಿ ||
ಎಲ್ಲರ ಮನಸು ಗೋಕುಲವಾಗಲಿ || ಕೊಳಲೂದೊ ||