ಮನೆ ದೇವರನಾಮ ಬಂದಿತು ಮಕರ ಸಂಕ್ರಾಂತಿ

ಬಂದಿತು ಮಕರ ಸಂಕ್ರಾಂತಿ

0

ಬಂದಿತು ಮಕರ ಸಂಕ್ರಾಂತಿ
ನೀಗಿತು ಎಲ್ಲಾ ಬ್ರಾಂತಿ ||
ನೀಡಿತು ಜಗಕೆ ಶಾಂತಿ
ಮೂಡಿತು ಅಮರ ಜ್ಯೋತಿ ||ಬಂದಿತು ||

ಜ್ಯೋತಿಯೇ ದೈವದ ಸಾಕ್ಷತ್ಕಾರ||
ಜ್ಯೋತಿಯೇ ಶಾಸ್ತ್ರನ ಅವತಾರ
ನಾಸ್ತಿಕರಲ್ಲು ನವ ಸಂಸ್ಕಾರ ||
ಆಸ್ತಕ ಜನರ ಉದ್ಧಾರ || ಬಂದಿತು ||

ಕೋಟಿ ಕೊರಳುಗಳ ಗುಂಪಿನ ಆ ಧ್ವನಿ
ಸೃಷ್ಟಿಸೆ ಇಲ್ಲಿ ಹೊಸ ಧರಣಿ ||
ಸ್ವರ್ಗವೇ ಇಲ್ಲಿ ಈ ಹವನಿ ||
ಸ್ವಾಮಿಯೆ ನಮಗೆ ಹೊರದಾನಿ ||ಬಂದಿತು ||