ಮನೆ ರಾಜ್ಯ ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಟಿಕೆಟ್ ಸಿಗುವ ವಿಶ್ವಾಸವಿದೆ-ಕೆಟಿಎಸ್

ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಟಿಕೆಟ್ ಸಿಗುವ ವಿಶ್ವಾಸವಿದೆ-ಕೆಟಿಎಸ್

0

ಮಂಡ್ಯ:ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧೆ ಬಯಸಿ ಜೆಡಿಎಸ್ ಟಿಕೆಟ್ ನಿರಿಕ್ಷೀಸುತ್ತಿದ್ದೇನೆ ಎಂದು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Join Our Whatsapp Group


ನಗರದಲ್ಲಿರುವ ಕರ್ನಾಟಕ ಸಂಘದ ಕೆ.ವಿ.ಎಸ್‌ಭವನದಲ್ಲಿ ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರ ಮಂಡ್ಯ ವ್ಯಾಪ್ತಿಯ ಶಿಕ್ಷಕರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜೂ.೦೩ರಂದು ವಿಧಾನಪರಿಷತ್ತಿನ ೬ ಸದಸ್ಯ ಸ್ಥಾನಗಳಿಗೆ ಮತದಾನ ಘೋಷಣೆಯಾಗಿದೆ,ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಸ್ಪರ್ಧೆ ಮಾಡಿ, ಗೆಲ್ಲಿಸಿಕೊಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಕಲ್ಪ ಶಿಕ್ಷಕರದ್ದಾಗಿದೆ, ಈ ನಿಟ್ಟಿನಲ್ಲಿ ಪ್ರಾಚಾರ್ಯರೂ ಶಿಕ್ಷಕರು ಆದ ನಾವು ಈ ಭಾರಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಒತ್ತಾಯವಿದ್ದ ಮೇರೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನುಡಿದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದಿಂದ ವಿಧಾನ ಪರಿಷತ್ತಿನ ಚುನಾವಣೆಗೂ ಮೈತ್ರಿ ಬಲ ಹೆಚ್ಚಲಿದೆ,ಈ ಹಿನ್ನೆಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರವು ಜೆಡಿಎಸ್‌ಗೆ ಲಭ್ಯವಾಗಬಹುದು,ಲಭ್ಯವಾದರೆ ಜೆಡಿಎಸ್ ಟಿಕೆಟ್ ನಮಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈಗಾಗಲೇ ನಾನು ಕಳೆದ ೧೩ತಿಂಗಳಿಂದಲೇ ೪ ಜಿಲ್ಲೆಗಳಲ್ಲಿ ಸತತ ಮೂರು ಮೂರು ಸುತ್ತು ಪ್ರತಿ ತಾಲೂಕಿನ ಶಿಕ್ಷಕ ಮತದಾರರನ್ನು ಸಂಪರ್ಕ ಮಾಡಿದ್ದೇನೆ,ಎಲ್ಲರೂ ಭರವಸೆ ನೀಡಿದ್ದಾರೆ,ನಾವು ಬದಲಾವಣೆಯನ್ನು ಬಯ
ಸುತ್ತೇವೆ,ಈ ಬಾರಿ ನಿಮಗೆ ಅವಕಾಶ ಮಾಡಿಕೊಡುತ್ತೇವೆ ನಮ್ಮ ಪ್ರತಿನಿಧಿ ಒಬ್ಬ ಶಿಕ್ಷಕನೇ ಇರಬೇಕು ಎನ್ನುವುದು ನಮ್ಮ ಬಯಕೆಯಾಗಿದೆ ಎಂದು ಮತದಾರರು ಭರವಸೆ ನೀಡಿದ್ದಾರೆ ಎಂದರು.
ಸದನದಲ್ಲಿ ನಾನು ಮಾತನಾಡುವಾಗ ಪದವೀಧರರ ಸಮಸ್ಯೆಗಳಿಗಿಂತ ಶಿಕ್ಷಕರ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆ ನಡಸಿ,ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇನೆ,
ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಿದೆ,ಜಾರಿ ಮಾಡಿಸುವ ಸವಾಲು ನಮ್ಮ ಮುಂದಿದೆ ಎಂದು ನುಡಿದರು.
ಸಭೆಯಲ್ಲಿ ಪಿಇಟಿ ಸಂಸ್ಥೆಯ ರಾಮಲಿಂಗಯ್ಯ,ಜೆಡಿಎಸ್ ಮುಖಂಡ ಎಂ. ಎಲ್.ತುಳಸೀಧರ್, ಶಿವರಾಮು, ಎಂ.ಆರ್.ಮಂಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ಬೆಂಬಲಿಗರು ಹಿತೈಷಿಗಳು ಹಾಜರಿದ್ದರು.

ಹಿಂದಿನ ಲೇಖನಮೇ 17 ರಂದು “ದ ಸೂಟ್‌’  ಸಿನಿಮಾ ಬಿಡುಗಡೆ
ಮುಂದಿನ ಲೇಖನಕರ್ನಾಟಕ ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಹೇಗೆ ?: ಎಚ್. ವಿಶ್ವನಾಥ್