ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ ||
ದುರ್ಬುದ್ಧಿಗಳನೆಲ್ಲ ಬಿಡಿಸೊ
ನಿನ್ನ ಕರುಣಕವಚವ ಎನ್ನ ಹಣೆಗೆ ತೊಡಿಸೊ |
ಚರಣಸೆವೆ ಎನಗೆ ಕೊಡಿಸೊ
ಕರಪುಷ್ಪವ ಎನ್ನ ಶಿರದಲ್ಲಿ ಮೂಡಿಸೊ || ೧ || ದಾಸನ ||
ದೃಢಭಕ್ತಿ ನಿನ್ನಲ್ಲಿ ಬೇಡಿ
ನಾ ಅಡಿಗೆರುಗವೆನಯ್ಯ ಅನುದಿನ ಪಾಡಿ |
ಕೆಡಗಣ್ಣಿಲೆನ್ನ ನೊಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ || ದಾಸನ ||
ಮೊರೆಹೊಕ್ಕಾವರ ಕಾವ್ಯ ಬಿರೆದು
ಎನ್ನ ಮರೆಯದೆ ರಕ್ಷಣ ಮಾಡಯ್ಯ ಪೊರೆದು |
ದುರಿತಗಳನ್ನು ತರಿದು
ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ || ದಾಸನ ||