ಮನೆ ಯೋಗಾಸನ ಈ ಯೋಗಾಸನಗಳು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ

ಈ ಯೋಗಾಸನಗಳು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ

0

ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅದು ಒಡೆದು ಅದರಿಂದಾಗುವ ನರಮಂಡಲದ ಮೇಲಿನ ಪರಿಣಾಮವನ್ನು ಪಾರ್ಶ್ವವಾಯು ಅಥವಾ ಸ್ಟ್ರೋಕ್ ಎಂದು ಕರೆಯುತ್ತೇವೆ. ಮಧುಮೇಹ, ರಕ್ತದೊತ್ತಡ, ಅತಿಯಾದ ಮಾನಸಿಕ ಒತ್ತಡ ಹೀಗೆ ಅನೇಕ ಕಾರಣಗಳಿಂದ ಸ್ಟ್ರೋಕ್ ಸಂಭವಿಸುತ್ತದೆ. ಭಾರತದಲ್ಲಿ ಹೃದಾಯಾಘಾತದ ನಂತರ ಅತಿ ಹೆಚ್ಚು ಜನ ಈ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ ಎನ್ನುತ್ತದೆ ವರದಿ.

ದೇಹದ ವಿವಿಧ ಭಾಗಗಳಲ್ಲಿ ಈ ಸ್ಟ್ರೋಕ್ ಸಂಭವಿಸಿ ಅಂಗಗಳಿಗೆ ಶಕ್ತಿ ಇಲ್ಲದಂತೆ ಆಗುತ್ತದೆ. ಪಾರ್ಶ್ವವಾಯುವಿಗೆ ಒಳಗಾದವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ತಕ್ಷಣ ಚಿಕಿತ್ಸೆ ದೊರಕಿದರೆ 24 ಗಂಟೆಯೊಳಗೆ ಅವರು ಚೇತರಿಸಿಕೊಳ್ಳಬಹುದು.

ಈ ರೀತಿ ಪಾರ್ಶ್ವವಾಯು ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಯೋಗಾಸನಗಳು ಹೆಚ್ಚು ಉಪಯುಕ್ತವಾಗಿವೆ. ಹಾಗಾದರೆ ಯಾವೆಲ್ಲಾ ಆಸನಗಳು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತವೆ ಎನ್ನುವ ಮಾಹಿತಿ ಇಲ್ಲಿದ ನೋಡಿ.

ತಾಡಾಸನ

ಅಪಾಯಕಾರಿ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ತಾಡಾಸನ ಹೆಚ್ಚು ಉಪಯುಕ್ತವಾಗಿದೆ. ಈ ಆಸನದಿಂದ ದೇಹದ ಭಾಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತಸಂಚಾರವಾಗುತ್ತದೆ. ಹೀಗಾಗಿ ಪಾರ್ಶ್ವವಾಯು ಅಪಾಯವನ್ನು ತಪ್ಪಿಸಬಹುದಾಗಿದೆ.

ಮಾಡುವ ವಿಧಾನ

• ಯೋಗ ಚಾಪೆಯ ಮೇಲೆ ನಿಂತುಕೊಳ್ಳಿ. ನಿಮ್ಮ ಪಾದಗಳು ಅಗಲವಾಗಿರಿಸಿಕೊಳ್ಳಿ

• ನಿಮ್ಮ ಕೈಗಳು ನಿಮ್ಮ ದೇಹದ ಪಕ್ಕದಲ್ಲಿರಬೇಕು.

• ಆಳವಾಗಿ ಉಸಿರಾಡಿ ಮತ್ತು ನಿಧಾನವಾಗಿ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ನಂತರ ನಿಮ್ಮ ಬೆರಳುಗಳನ್ನು ಇಂಟರ್ಲಾಕ್ ಮಾಡಿ.

• ಹಿಮ್ಮಡಿಯನ್ನು ಕೊಂಚ ಮೇಲಕ್ಕೆತ್ತಿ ಬೆರಳುಗಳ ಮೇಲೆ ನಿಂತುಕೊಳ್ಳಿ. ಮೂರರಿಂದ ನಾಲ್ಕು ಬಾರಿ ಉಸಿರಾಟ ನಡೆಸಿ ನಂತರ ಸಹಜ ಸ್ಥಿತಿಗೆ ಬನ್ನಿರಿ.

ದಂಡಾಸನ

ಈ ಭಂಗಿಯಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು. ಈ ಆಸನ ಸ್ನಾಯು, ಮೂಳೆಗಳನ್ನು ಬಲಪಡಿಸುತ್ತದೆ. ಹೀಗಾಗಿ ನಿಯಮಿತ ದಂಡಾಸನದ ಅಭ್ಯಾಸದಿಂದ ಸ್ಟ್ರೋಕ್ ಉಂಟಾಗುವುದನ್ನು ತಡೆಯಬಹುದಾಗಿದೆ.

ಮಾಡುವ ವಿಧಾನ

• ನಿಮ್ಮ ಕಾಲುಗಳನ್ನು ನೇರವಾಗಿ ಒಟ್ಟಿಗೆ ನೆಲದ ಮೇಲೆ ಕುಳಿತುಕೊಳ್ಳಿ ಮತ್ತು ನೇರವಾಗಿ ಕುಳಿತುಕೊಳ್ಳಿ.

• ನಿಮ್ಮ ಸೊಂಟದ ಹಿಂದೆ, ನೆಲದ ಮೇಲೆ ಕೈಗಳನ್ನು ಬಲವಾಗಿ ಒತ್ತಿರಿ.

• ಕೈಗಳನ್ನು ನೆಲದ ಮೇಲೆ ಇರಿಸಿ.

• ಬೆನ್ನುಮೂಳೆಯನ್ನು ನೇರವಾಗಿ ಮತ್ತು ಎದೆಯನ್ನು ಮುಂದಕ್ಕೆ ಬರುವಂತೆ ನೋಡಿಕೊಳ್ಳಿ.

• ನಿಮ್ಮ ಗಲ್ಲವನ್ನು ನಿಮ್ಮ ಎದೆಯ ಕಡೆಗೆ ಎಳೆಯಿರಿ ಮತ್ತು ಆಳವಾಗಿ ಉಸಿರಾಡಿ

ಹನುಮಾನಾಸನ

ಈ ಆಸನದಲ್ಲಿ ಕಾಲುಗಳು ನೇರವಾಗಿ ಚಾಚುವುದರಿಂದ ಫ್ಲೆಕ್ಸಿಬಲ್ ಆಗಿರುವ ದೇಹವನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ರಕ್ತ ಪರಿಚಲನೆಗೆ ಸಹಾಯಕವಾಗಿದೆ. ಹನುಮಾನಾಸನವನ್ನು ಮಂಕಿ ಪೋಸ್ ಎಂದೂ ಕರೆಯುತ್ತಾರೆ. ಇದು ಮಾನಸಿಕ ಒತ್ತಡವನ್ನೂ ತಡೆಯುತ್ತದೆ.

ಮಾಡುವ ವಿಧಾನ

• ನೆಲಕ್ಕೆ ಲಂಬವಾಗಿರುವ ತೊಡೆಗಳೊಂದಿಗೆ ಮಂಡಿಯೂರಿ ಸ್ಥಾನಕ್ಕೆ ಬನ್ನಿ.

• ನಿಮ್ಮ ಮೊಣಕಾಲುಗಳ ಮುಂದೆ ನಿಮ್ಮ ಕೈಗಳನ್ನು ನೆಲಕ್ಕೆ ತಗ್ಗಿಸಿ.

• ನೆಲದ ಮೇಲೆ ಹಿಮ್ಮಡಿಯೊಂದಿಗೆ ಬಲಗಾಲನ್ನು ನೇರವಾಗಿ ನಿಮ್ಮ ಮುಂದೆ ತನ್ನಿ.

• ನಿಮ್ಮ ಬಲ ಪಾದವನ್ನು ಬಲವಾಗಿ ಬಗ್ಗಿಸಿ.

• ಬಲಗಾಲನ್ನು ನೇರವಾಗಿರಿಸಿ, ಬಲಗಾಲನ್ನು ಮುಂದಕ್ಕೆ ಸ್ಲೈಡ್ ಮಾಡಿ.

• ಎಡಗಾಲನ್ನು ನಿಮ್ಮ ಹಿಂದೆ ಸಾಧ್ಯವಾದಷ್ಟು ನೇರವಾಗಿ ವಿಸ್ತರಿಸಿ.

• ಸೊಂಟವನ್ನು ಒಂದಕ್ಕೊಂದು ಸಮಾನಾಂತರವಾಗಿ ಇರಿಸಿ ಮತ್ತು ಮುಂದಕ್ಕೆ ಎದುರಿಸಿ.

• 5 ರಿಂದ 10 ಉಸಿರಾಟದವರೆಗೆ ಭಂಗಿಯನ್ನು ಹಿಡಿದುಕೊಳ್ಳಿ, ತದನಂತರ ಇನ್ನೊಂದು ಬದಿಯಲ್ಲಿ ಪುನರಾವರ್ತಿಸಿ.

• ವಿಶ್ರಾಂತಿಗೆ ಬರುವಾಗ ಬಲಗಾಲನ್ನು ಬಗ್ಗಿಸಿ, ನಿಮ್ಮ ಎಡ ಮೊಣಕಾಲಿನ ಮೇಲೆ ಬನ್ನಿ, ಮತ್ತು ಬಲಗಾಲನ್ನು ಮತ್ತೆ ದೇಹದ ವಾಪಸ್ ಎಳೆದುಕೊಳ್ಳಿ.

ವೀರಭದ್ರಾಸನ

ಕೈ ಮತ್ತು ಕಾಲುಗಳ ಸ್ನಾಯುಗಳನ್ನು ಬಲಪಡಿಸಿ, ರಕ್ತಸಂಚಾರವನ್ನು ಉತ್ತಮಗೊಳಿಸಲು ವೀರಭದ್ರಾಸನ ಸಹಾಯಕವಾಗಿದೆ. ವಾರಿಯರ್ ಪೋಸ್ ಎಂದು ಕರೆಯುವ ಈ ಆಸನ ಪಾರ್ಶ್ವವಾಯುವನ್ನು ತಡೆಯಲು ಸಹಾಯಕವಾಗಿದೆ.

ಮಾಡುವ ವಿಧಾನ

• ನಿಮ್ಮ ಕಾಲುಗಳನ್ನು ಅಗಲವಾಗಿ ಇರಿಸಿ ನೇರವಾಗಿ ನಿಂತುಕೊಳ್ಳಿ.

• ಬಲ ಪಾದವನ್ನು 90 ಡಿಗ್ರಿಗಳಷ್ಟು ಮತ್ತು ಎಡ ಪಾದವನ್ನು ಒಳಗೆ ತಿರುಗಿಸಿ

• ನಿಮ್ಮ ಎರಡೂ ಕೈಗಳನ್ನು ನಿಮ್ಮ ಭುಜದ ಎತ್ತರಕ್ಕೆ ಪಕ್ಕಕ್ಕೆ ಇರಿಸಿ. ಅಂಗೈಗಳು ಮೇಲ್ಮುಖವಾಗಿರಬೇಕು.

• ಉಸಿರಾಡುವಾಗ, ನಿಮ್ಮ ಬಲ ಮೊಣಕಾಲು ಬಗ್ಗಿಸಿ.

•  ನಿಮ್ಮ ತಲೆಯನ್ನು ನಿಮ್ಮ ಬಲಕ್ಕೆ ತಿರುಗಿಸಿ.

• ಹೆಚ್ಚು ಒತ್ತಡವನ್ನು ಹಾಕದೆ ನಿಮ್ಮ ಕೈಗಳನ್ನು ಚಾಚಿ.

ಪ್ರಾಣಾಯಾಮ

ಪ್ರಾಣಾಯಾಮದಿಂದ ದೇಹದಲ್ಲಿ ಉಸಿರಾಟ ಸರಾಗವಾಗಿ ಆಗುತ್ತದೆ. ಅಲ್ಲದೆ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಿ, ಮಾನಸಿಕವಾಗಿ ವಿಶ್ರಾಂತಿ ನೀಡುತ್ತದೆ. ಹೀಗಾಗಿ ಪ್ರತಿದಿನ ಪ್ರಾಣಾಯಾಮದ ಅಭ್ಯಾಸ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ತಡೆಯಬಹುದಾಗಿದೆ.

ಸೂರ್ಯ ನಮಸ್ಕಾರದಲ್ಲಿನ 12 ಹಂತಗಳು ಸಹ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನೆರವಾಗುತ್ತವೆ. ಅವು ಯಾವವೆಂದರೆ ಪ್ರಣಾಮಾಸನ, ಹಸ್ತ ಉತ್ಥಾನಾಸನ, ಹಸ್ತಪಾದಾಸನ, ಅಶ್ವ ಸಂಚಾಲಾಸನ, ದಂಡಾಸನ, ಅಷ್ಟಾಂಗ ನಮಸ್ಕಾರ, ಭುಜಂಗಾಸನ, ಪರ್ವತಾಸನ ಮಾಡಿ ಮತ್ತೆ ಪುನಃ ಅದೇ ಆಸನಗಳ ಮೂಲಕ ಸಹಜ ಸ್ಥಿತಿಗೆ ಬರಬಹುದು.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ರಕ್ತ ಚಲನೆ, ಅಲ್ಲದೆ ಅಸ್ತಮಾ, ಖಿನ್ನತೆಯನ್ನು ದೂರ ಮಾಡಲು ಕೂಡ ಸಹಾಯಕವಾಗಿದೆ.

ಹಿಂದಿನ ಲೇಖನದಾಸನ ಮಾಡಿಕೊ ಎನ್ನ
ಮುಂದಿನ ಲೇಖನಹೊಸ ವರ್ಷದಂದು ಈ ಐದು ವಸ್ತುಗಳನ್ನು ಮನೆಗೆ ತಂದರೆ ಸಂತೋಷ ಸಮೃದ್ಧಿ