ಮನೆ ದೇವರ ನಾಮ ಧನಲಕ್ಷ್ಮೀ ದಯೆ ತೋರಿ

ಧನಲಕ್ಷ್ಮೀ ದಯೆ ತೋರಿ

0

ಧನಲಕ್ಷ್ಮೀ ದಯೆ ತೋರಿ

ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ |

ಕರವೀರ ಪುರದಲ್ಲಿ ಬಂದು ನೆಲೆಸಿ

ಗತಿ ನೀನೇ ಎಂದವರ ಕೈ ಬಿಡದೆ ಹರಸಿ |

ಕಾಪಾಡುವ ತಾಯೆ ಬಾರೆ ಕನಿಕರಿಸಿ ||

ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |

ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ |

ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ |

ಸಿರಿವಂತರ ಸೆರೆಯ ತೊರೆದು ಬಾರಮ್ಮ ||

ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ |

ದಿವ್ಯ ದರುಶನ ನೀಡೆ ಒಲಿದು ಬಾರಮ್ಮ |

ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ ತಡೆದರದಿ ಪೂರೈಸಿ ಬೇಗ ಸಲಹಮ್ಮ

ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ ಸುರಲೋಕದ ಪಾರಿಜಾತ ಅರ್ಪಿಸುವೆ |

ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು | ಸಿರಿ ಪಾದ ಕಮಲಗಳಿಂದೆ ಪೂಜಿಸುವೆ