ಮನೆ ಸಾಹಿತ್ಯ ತಲೆಮಾರಿನ ಅಂತರ

ತಲೆಮಾರಿನ ಅಂತರ

0

 ಕುಟುಂಬದಲ್ಲಿ ಹಿರಿಯರ ವರ್ತನೆಗಳಿಗೂ ಮಕ್ಕಳ ವರ್ತನೆಗಳಿಗೂ ನಡುವೆ ವ್ಯತ್ಯಾಸ ಬಂದು ಮಾನಸಿಕ ಆತೃಪ್ತಿಗಳು ಏಕೆ ನಿರ್ಮಾಣ ಆಗುತ್ತವೆ? ಒಂದು ಸಣ್ಣ ಕಥೆಯನ್ನು ಕೇಳಿ : ಒಂದೂರಿನಲ್ಲಿ ಒಬ್ಬ ರೈತ ಇದ್ದನಂತೆ. ಅವನಿಗೊಬ್ಬ ಮಗ.ಮಗನು ಬೆಳೆದಾಗ ಅವನಿಗೆ ಮದುವೆಯೂ ಆಯಿತು. ಅವನೂ ರೈತನೇ. ಅಪ್ಪ ರೈತ ಈಗ ಹಣ್ಣು ಹಣ್ಣು ಮುದುಕನಾಗಿದ್ದಾನೆ. ಮಗ ರೈತ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾನೆ. ಮಗ ರೈತನಿಗೆ ಒಬ್ಬ ಮಗ ಹುಟ್ಟಿ ಬೆಳೆಯ ತೊಡಗಿದ.ಅಪ್ಪ ರೈತ ಮೊಮ್ಮಗನೊಂದಿಗೆ ಆಟವಾಡುತ್ತಿದ್ದ. ಶಾಲೆಗೆ ಹೋಗುವ ವಯಸ್ಸು ಬಂದಾಗ ಮೊಮ್ಮಗನನ್ನು ಶಾಲೆಗೆ ಕಳಿಸಿದರು. ಒಂದು ದಿನ ಮೊಮ್ಮಗ ಶಾಲೆಯಲ್ಲಿ ಏನೋ ಕೀಟಲೆ ಮಾಡಿದ.ಅದರ ದೂರು  ಮನೆಗೆ ಬಂದಿತು. ಆಜ್ಜ ರೈತ ತನ್ನ ಪಾಡಿಗೆ ಏನೋ ಕೆಲಸಗಳನ್ನು ಮಾಡುತ್ತಿದ್ದ.ಅಪ್ಪ ರೈತ ತನ್ನ ಮಗನ ಮೇಲೆ ಸಿಟ್ಟಿಗೆದ್ದು ಬಯ್ಯಲು ತೊಡಗಿದ. ಬೈಗುಳದ ಗದ್ದಲವನ್ನು ಕೇಳಿದ ಅಜ್ಜ ರೈತ “ಯಾಕೋ, ಯಾಕೋ ಅವನಿಗೆ ಅಷ್ಟೊಂದು ಬೈತಿದ್ದೀಯಾ.ಹುಡುಗ  ಏನೋ ತಪ್ಪು ಮಾಡಿರುತ್ತಾನೆ. ಬಿಟ್ಟುಬಿಡು” ಎಂದ ಅದಕ್ಕೆ ಅದಕ್ಕೆ ಸಿಟ್ಟಿಗೆದ್ದ ಅಪ್ಪ ರೈತ “ಸುಮ್ಮನಿರಿ,ನನ್ನ ಮಗನಿಗೆ ನಾವು ಬುದ್ಧಿ ಹೇಳುತ್ತೇನೆ. ಅದಕ್ಕೆ ನೀವೆಂಥದು  ಮಧ್ಯಬಾಯಿ ಹಾಕುವುದು” ಎಂದ ಆಗ ಅಜ್ಜ ರೈತ ನಸುನಗುತ್ತಾ “ಅದೇ ಕೆಲಸವನ್ನು  ಕಣೋ, ನಾನು ಕೂಡ ಮಾಡ್ತಿದ್ದು ”ಎಂದ ಅಪ್ಪ ರೈತನೂ ನಕ್ಕು ತೆಪ್ಪಗಾದ.

Join Our Whatsapp Group

   ಈ ಕಥೆ ತಲೆಮಾರುಗಳ ನಡುವಿನ ಅಂತರ ಮತ್ತು ಭಿನ್ನತೆಗಳನ್ನು ಹೇಳುತ್ತದೆ.ಹಿರಿಯರು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿಯೂ,ಮಕ್ಕಳು ಹಿರಿಯರನ್ನು ಅರ್ಥ ಮಾಡಿಕೊಳ್ಳುವುದರಲ್ಲಿಯೂ ಉಂಟಾಗುವ ಮುಖ್ಯ ಸಮಸ್ಯೆಗೆ ಕಾರಣ

 ತಲೆಮಾರಿನ  ಅಂತರ. ವ್ಯಕ್ತಿಯಲ್ಲಿ ಒಂದು ಧೋರಣೆಯು ರೂಪಗೊಳ್ಳುವ ಪ್ರತಿಕ್ರಿಯೆಯಲ್ಲಿ ಸುಮಾರು 30 -35  ವರ್ಷ ವಯಸ್ಸಿನವರೆಗಿನ ಆತನ /ಆಕೆಯ ಪರಿಸರದ ಅನುಭವಗಳು ಪ್ರಭಾವವನ್ನು ಬೀರುತ್ತವೆ. ಈಗಿಗ ಆ ಅಂತರವು ಬಹಳ ಕಡಿಮೆಯಾಗಿ 4 – 5 ವರ್ಷ ವಯಸ್ಸಿನ ಅಂತರವೇ ಧೋರಣೆಯ ವ್ಯತ್ಯಾಸವನ್ನು ಸ್ಥಾಪಿಸುತ್ತದೆ.ನಮ್ಮ ಸಮಾಜದಲ್ಲಿ ತಂತ್ರಜ್ಞಾನವು ಉಂಟು ಮಾಡಿರುವ ತೀವ್ರ ತರಹದ ಬದಲಾವಣೆಗಳೇ ತಲೆಮಾರಿನ ಅಂತರವು ಕಡಿಮೆಯಾಗಲು ಕಾರಣವಾಗಿದೆ.ತಲೆಮಾರಿನ ಅಂತರವು ನಮ್ಮ ಕಣ್ಣಿಗೆ ಒಂದು ಕನ್ನಡಕವಿದ್ದಂತೆ ನಮ್ಮ ಕನ್ನಡಕದ ಮೂಲಕ ನೋಡಿದ್ದೇ ಸರಿಯೆಂದು ಅಂದುಕೊಳ್ಳುತ್ತೇವೆ. ಅದ್ದರಿಂದ ಹಿರಿಯರಿಗೂ — ಕಿರಿಯರಿಗೂ ಮನಸ್ತಾಪಗಳು ಉಂಟಾಗುತ್ತವೆ.  ವಿವೇಕಿಗಳಾದರು ತಾವು ಧರಿಸಿರುವ ಕನ್ನಡಕವನ್ನು ತೆಗೆದು ನೋಡುತ್ತಾರೆ. ಆಗ ಕೌಟುಂಬಿಕ ಸಂಬಂಧಗಳು ಇನ್ನಷ್ಟು ಆಪ್ತವಾಗುತ್ತವೆ.

ಹಿಂದಿನ ಲೇಖನಹಲ್ಲೆ, ಕೊಲೆ ಆರೋಪ ಪ್ರಕರಣ: ಯಾರು ಈ ರೇಣುಕಾಸ್ವಾಮಿ?
ಮುಂದಿನ ಲೇಖನಕಬ್ಬಿನ ಬಾಕಿ ಹಣ ಬಡ್ಡಿ ಸಮೇತ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಿ: ಕುರುಬೂರು ಶಾಂತಕುಮಾರ ಒತ್ತಾಯ