ಮನೆ ದೇವರ ನಾಮ ಮಕರದ ಮಂಜಿನಲಿ ಶಬರಿಮಲೈ

ಮಕರದ ಮಂಜಿನಲಿ ಶಬರಿಮಲೈ

0

ಮಕರದ ಮಂಜಿನಲಿ ಶಬರಿಮಲೈ

ಮೈಮನ ತುಂಬಿಸುವ ಶಬರಿಮಲೈ

ನಿನ್ನ ಮುಖ ಬಿಂಬವದು

ಕಣ್ಣ್ ತುಂಬ ನೆಲೆಸಿಹುದು

ಕಾಂತಿಮಲೆ ಜ್ಞಾನಜ್ಯೋತಿ ಅಯ್ಯಪ್ಪ ಸ್ವಾಮಿ

ಜ್ಯೋತಿಯ ರೂಪದಲಿ ಭಕ್ತಿಗೆ ಬೆಳಕಾದೆ

ನಂದಾದೀಪದೊಳು ಮನದಲಿ ಬೆರೆದೆ

ಭಕ್ತರ ಕೋರಿಕೆಯ ಅಯ್ಯಪ್ಪ ತೀರಿಸುವ

ಪದಗಳ ಹಾಡುತ ಸೇರೋಣ ಶಬರಿಮಲೈ

ಭಕ್ತ ಸಮೂಹದ ನಾಯಕನ

ನಂಬಿದ ಜನಕೆಲ್ಲಾ ಭಾಗ್ಯ ತರುವವನ

ಇರುಮುಡಿ ಬುತ್ತಿಯಲಿ ಸಿರಿಸುಖ ತುಂಬುವನ

ಅವನೆ ನೆನೆಯುತ ಸೇರೋಣ ಶಬರಿಮಲೈ

ಹಿಂದಿನ ಲೇಖನನಮ್ಮದು ಬಡವರ, ದೀನದಲಿತರ, ಕಾರ್ಮಿಕರ ಪರವಾದ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಸ್ನಾಯುಗಳ ಬಲವರ್ಧನೆಗೆ ನೆರವಾಗುವ ಯೋಗಾಸನಗಳ ಮಾಹಿತಿ