ಶ್ರೀದೇವಿ ನೀನಮ್ಮ ಮೂಕಾಂಬಿಕೆ
ನೂರಾರು ನಮಸ್ಕಾರ ಸಿರಿ ಪಾದಕೆ
ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ
ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ||
ಜಯದೇವಿ ಜಯಜನನಿ ಜನನಾಯಕಿ
ಜಯ ವಿಜಯ ನೀ ನೀಡು ಜಗದ್ರಕ್ಷಕಿ
ಕೊಡಚಾದ್ರಿಯಿಂದಿಳಿದ ಕರುಣಾಮಯಿ
ಕೊಲ್ಲೂರಿನಲ್ಲಿ ಇರುವ ಮಮತಾಮಯಿ ||೧||
ಚಾಮುಂಡಿ ನೀನೇ ಮಹಾಲಕ್ಷ್ಮಿ ನೀನೇ
ಶೃಂಗೇರಿಯಲ್ಲಿರುವ ಶಾರದೆಯು ನೀನೇ
ಶ್ರೀ ಶಂಕರಾಚಾರ್ಯರ ಆರಾಧ್ಯ ದೇವಿ
ಶ್ರೀ ಶಕ್ತಿ ನೀನೇ ಹೇ ದೇವಿ ಮಹಾದೇವಿ ||೨||
ಆನಂದ ಸುಧೆಯಲ್ಲಿ ಮೀಸುತ ಜಗವ
ನೀ ತರುವೆ ಅಂಬೆ ಪರ ಪರಿವಿಭವ
ಮಣಿದ್ವೀಪದಲ್ಲಿರುವ ಮಹಾದೇವಿ ಶರಣು
ಮನದ ಮಂದಾರದ ಮಹಾದೇವಿ ಶರಣು ||೩||