ರಾಮ ರಾಮ ಎಂಬೆರಡಕ್ಷರ|
ಪ್ರೇಮದಿ ಸಲಹಿತು ಸುಜನರನು||ಪ||
ಹಾಲಹಲವನು ಪಾನವ ಮಾಡಿದ
ಪಾಲಲೊಚನನೆ ಬಲ್ಲವನು|
ಆಲಾಪಿಸುತಾ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೆನು||೧||ಪ||
ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು|
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೆನು||೨||ಪ||
ಕಾಲವನರಿತು ಸೇವೆಯಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು|
ವ್ಯಾಳಶ್ಯನ ಶ್ರೀ ವಿಜಯವಿಟ್ಟಲನ
ಲೀಲೆಶರದಿಯ ಕೇಳೆನು||೩||ಪ||