ಮನೆ ದೇವರ ನಾಮ ರಾಮ ರಾಮ ಎಂಬೆರಡಕ್ಷರ|

ರಾಮ ರಾಮ ಎಂಬೆರಡಕ್ಷರ|

0

ರಾಮ ರಾಮ ಎಂಬೆರಡಕ್ಷರ|
ಪ್ರೇಮದಿ ಸಲಹಿತು ಸುಜನರನು||ಪ||

ಹಾಲಹಲವನು ಪಾನವ ಮಾಡಿದ
ಪಾಲಲೊಚನನೆ ಬಲ್ಲವನು|
ಆಲಾಪಿಸುತಾ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೆನು||೧||ಪ||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು|
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೆನು||೨||ಪ||

ಕಾಲವನರಿತು ಸೇವೆಯಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು|
ವ್ಯಾಳಶ್ಯನ ಶ್ರೀ ವಿಜಯವಿಟ್ಟಲನ
ಲೀಲೆಶರದಿಯ ಕೇಳೆನು||೩||ಪ||

ಹಿಂದಿನ ಲೇಖನ5, 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಿಲ್ಲ: ಬಿ.ಸಿ.ನಾಗೇಶ್‌
ಮುಂದಿನ ಲೇಖನದಂಡಾಸನ ಯೋಗಾಭ್ಯಾಸದ ಪ್ರಕಾರಗಳು ಮತ್ತು ಅವುಗಳ ಉಪಯೋಗಗಳು