ಮನೆ ರಾಜ್ಯ ಹುಲಿ ಉಗುರಿನ ಸಂಕಷ್ಟದಲ್ಲಿ ಧನಂಜಯ ಗುರೂಜಿ : ಅರಣ್ಯಾಧಿಕಾರಿಗಳಿಂದ ವಿಚಾರಣೆ

ಹುಲಿ ಉಗುರಿನ ಸಂಕಷ್ಟದಲ್ಲಿ ಧನಂಜಯ ಗುರೂಜಿ : ಅರಣ್ಯಾಧಿಕಾರಿಗಳಿಂದ ವಿಚಾರಣೆ

0

ತುಮಕೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಸ್ವಯಂ ಘೋಷಿತ ಧನಂಜಯ ಗುರೂಜಿಗೆ ಸಂಕಷ್ಟ ಎದುರಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯಲ್ಲಿ ಶನಿಮಹಾತ್ಮ ದೇವಾಲಯದ ಅರ್ಚಕನಾಗಿದ್ದ ಧನಂಜಯ ಗುರೂಜಿ, ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಸ್ವಾಮೀಜಿಯಾಗಿದ್ದಾರೆ.

ಗೂರೂಜಿಯಾದ ಬಳಿಕ ಮೈ ತುಂಬಾ ಬಂಗಾರದ ಓಡವೆ ಧರಿಸಿರುವ ಗುರೂಜಿ, ಒಡವೆಗಳ ಜೊತೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ.

ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿ ಪೋಟೊ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ನಾಗರಾಜ್‌ ರಿಂದ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ಈ ಸಂಬಂಧ ಕುಣಿಗಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಧನಂಜಯ್ಯ ಗುರೂಜಿಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಹುಲಿ‌ ಉಗುರಿನ ಪೆಂಡೆಂಟ್ ಧರಿಸಿದ‌ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಹುಲಿ ಉಗುರು ಧರಿಸಿಲ್ಲ ಎಂದು ಧನಂಜಯ್ಯ ಗುರೂಜಿ ಮಾಹಿತಿ ನೀಡಿದ್ದಾರೆ.