ಮನೆ ಯೋಗಾಸನ ದೀರ್ಘ ಉಸಿರಾಟಕ್ಕೆ ಧನುರಾಸನ

ದೀರ್ಘ ಉಸಿರಾಟಕ್ಕೆ ಧನುರಾಸನ

0

ಅರ್ಥ: ಧನು ಎಂದರೆ ಬಿಲ್ಲು ಎಂದರ್ಥ. ಬಿಲ್ಲಿನ ಎರಡು ತುದಿಗಳಿಗೆ ಹಗ್ಗವನ್ನು ಕಟ್ಟಿದ ಸ್ಥಿತಿಯನ್ನು ಈ ಆಸನ ಹೋಲುವುದರಿಂದ ಈ ಆಸನಕ್ಕೆ ಧನುರಾಸನ ಎಂದು ಹೆಸರು ಬಂದಿದೆ.

Join Our Whatsapp Group


ಮಾಡುವ ವಿಧಾನ: ಮೊದಲು ಹೊಟ್ಟೆಯ ಮೇಲೆ ಮಲಗಬೇಕು. ನಂತರ ಎರಡು ಮೊಣಕಾಲುಗಳನ್ನು ಮಡಿಸಬೇಕು. ಎರಡು ಕೈಗಳನ್ನು ಹಿಂದೆ ತೆಗೆದುಕೊಂಡು ಕಾಲುಗಳ ಮಣಿಗಂಟುಗಳನ್ನು ಹಿಡಿದುಕೊಳ್ಳಬೇಕು. ಬಲಗೈನಿಂದ ಬಲಗಾಲಿನ ಮಣಿಗಂಟನ್ನು ಎಡಗೈನಿಂದ ಮಣಿಗಂಟನ್ನು ಹಿಡಿದು ಕಾಲುಗಳನ್ನು ಹಿಂದಕ್ಕೆ ಎಳೆಯುತ್ತ ಎದೆ, ಎರಡು ಮಂಡಿ ಮತ್ತು ಎರಡು ತೊಡೆಗಳು ಮೇಲಕ್ಕೆ ಬರಬೇಕು. ನಾಭಿಯ ಭಾಗದ ಮೇಲೆ ಶರೀರದ ಸಂಪೂರ್ಣ ಭಾರವಿರಬೇಕು. ನಾಭಿಯ ಭಾಗ ಮಾತ್ರ ನೆಲಕ್ಕೆ ತಾಗಿರಬೇಕು. ದೃಷ್ಟಿ ಮುಂದೆ ಇರಬೇಕು. ಹಾಗೆಯೇ ನಿಧಾನವಾಗಿ ಕಾಲುಗಳನ್ನು ಕೆಳಗೆ ಇಳಿಸಬೇಕು. ಬಳಿಕ ಕೈಗಳನ್ನು ಬಿಟ್ಟು ವಿಶ್ರಾಂತಿ ಪಡೆಯಿರಿ.
ಉಪಯೋಗ:
-ಈ ಆಸನದಲ್ಲಿ ಬೆನ್ನುಮೂಳೆಯನ್ನು ಹಿಂದೆ ಬಾಗಿಸುವುದರಿಂದ ಬೆನ್ನು ಮೂಳೆಗಳಲ್ಲಿನ ಬಿಗಿತ ಕಡಿಮೆಯಾಗಿ ಸಡಿಲತೆ ಬರುವುದು.
-ಕಿಬ್ಬೊಟ್ಟೆಯೊಳಗಿನ ಅವಯವಗಳು ಹುರುಪು ಪಡೆಯುವವು.
-ಎದೆಯ ಭಾಗ ವಿಶಾಲವಾಗುವುದು.
-ಉಸಿರಾಟ ಕ್ರಿಯೆ ದೀರ್ಘವಾಗುವುದು.
-ಬೆನ್ನು ಮೂಳೆ ಜರುಗಿದವರಿಗೆ ಉತ್ತಮ ಆಸನವಿದು.