ಮನೆ ಕಾನೂನು ಧಾರವಾಡ: ದಾಖಲಾತಿ ಇಲ್ಲದೇ  ಬಸ್‌ ಮೂಲಕ ಸಾಗಿಸುತ್ತಿದ್ದ 4.97 ಲಕ್ಷ ರೂ ವಶಕ್ಕೆ

ಧಾರವಾಡ: ದಾಖಲಾತಿ ಇಲ್ಲದೇ  ಬಸ್‌ ಮೂಲಕ ಸಾಗಿಸುತ್ತಿದ್ದ 4.97 ಲಕ್ಷ ರೂ ವಶಕ್ಕೆ

0

ಧಾರವಾಡ: ಯಾವುದೇ ದಾಖಲಾತಿ ಇಲ್ಲದೇ ಸಾರಿಗೆ ಸಂಸ್ಥೆ ಬಸ್‌ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದ್ದ 4,97,600 ರೂಪಾಯಿಗಳನ್ನು ತೇಗೂರು ಚೆಕ್‌ ಪೋಸ್ಟ್‌ ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಿಪ್ಪಾಣಿಯಿಂದ ಭದ್ರಾವತಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಚಿಕ್ಕಮಗಳೂರಿನ ಮಶೋದ್ ಎಂಬ ವ್ಯಕ್ತಿ ಪ್ರಯಾಣಿಸುತ್ತಿದ್ದ. ಈ ಬಸ್ಸನ್ನು ತೇಗೂರು ಚೆಕ್‌ ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು. ಆಗ ಮಶೋದ್‌ ಎಂಬಾತನ ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ 4,97,600 ರೂಪಾಯಿ ಇದ್ದದ್ದು ಕಂಡು ಆತ ಬೆಳಗಾವಿ ಮತ್ತು ನಿಪ್ಪಾಣಿಗೆ ಟಿಂಬ‌ರ್ ಪೂರೈಕೆ ಮಾಡಿದ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.

ಆದರೆ ಅದಕ್ಕೆ ಯಾವುದೇ ದಾಖಲಾತಿಯನ್ನು ಆತ ಪೂರೈಸದೇ ಇರುವುದರಿಂದ ಚುನಾವಣಾಧಿಕಾರಿಗಳು ಆ ಹಣವನ್ನು ತಮ್ಮ ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಮುಂದಿನ ಲೇಖನಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ