ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ತೊಂದರೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಇದರ ನಡುವೆ ಜಗತ್ತಿನ ಹಲವೆಡೆ ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬ ಪ್ರಚಾರ ಆರಂಭವಾಗಿದೆ. ಇದನ್ನು ‘ಮಧುಮೇಹ ಹಿಂದಿರುಗಿಸುವ ಚಿಕಿತ್ಸಾಲಯ’ ಎಂಬ ಪರಿಕಲ್ಪನೆ ಆರಂಭವಾಗಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯ ಕೂಡ ಇದನ್ನು ಅಳವಡಿಸಿಕೊಂಡಿದೆ. ಆಸಕ್ತರಿಗೆ ಅಲ್ಲಿನ ವೈದ್ಯರು ಈ ಬಗ್ಗೆ ವೈದ್ಯಕೀಯ ಮಾರ್ಗದರ್ಶನ ಮಾಡುತ್ತಿದ್ದಾರೆ.
ಇಲ್ಲಿನ ವೈದ್ಯ ಕೀರ್ತಿ ಶೆಟ್ಟಿ ಅವರು ಈ ಪರಿಕಲ್ಪನೆಯ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನಾವು ಅಗತ್ಯಕ್ಕಿಂತಲೂ ಕಾರ್ಬೋಹೈಡ್ರೆಟ್ ತಿನ್ನುತ್ತಿದ್ದೇವೆ. ಅಕ್ಕಿ, ಗೋಧಿ ಮತ್ತು ರಾಗಿಯಿಂದ ಮಾಡಿದ ಎಲ್ಲ ಬಗೆಯ ಪದಾರ್ಥಗಳು, ಸಿಹಿ ತಿನಿಸುಗಳು ಇವುಗಳೆಲ್ಲ ಕಾರ್ಬೋಹೈಡ್ರೆಟ್ ಗಳು. ಇವುಗಳು ಜೀರ್ಣವಾಗಲು ನಮ್ಮ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆಯಾಗಬೇಕು. ನಮ್ಮ ದೇಹಕ್ಕೆ ಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಕಾರ್ಬೋಹೈಡ್ರೆಟ್ ಆಹಾರವನ್ನು ಸೇವಿಸುತ್ತೇವೆ. ಹಲವು ಸಂದರ್ಭಗಳಲ್ಲಿ ನಾವು ಸೇವಿಸುವ ಕಾರ್ಬೋಹೈಡ್ರೆಟ್ ಪ್ರಮಾಣ ಶೇಕಡ ೮೦ ದಾಟುತ್ತದೆ. ನಮ್ಮ ದೇಹಕ್ಕೆ ಬೇಕಿರುವುದು ಶೇಕಡ 40 ರಿಂದ 60ರಷ್ಟು ಮಾತ್ರ. ಇದನ್ನೆಲ್ಲ ಜೀರ್ಣಪಡಿಸಲು ಇನ್ಸುಲಿನ್ ಅಗತ್ಯವಿದೆ.
ನಾವು ಅಧಿಕವಾಗಿ ತಿಂದ ಕಾರ್ಬೋಹೈಡ್ರೆಟ್ ನಮ್ಮ ಧೇಹದಲ್ಲಿ ಶೇಖರಣೆಯಾಗುತ್ತಾ ಬೊಜ್ಜಾಗಿ ಪರಿವರ್ತನೆಯಾಗುತ್ತದೆ. ಬ್ಲಡ್ ಕೊಲೆಸ್ಟಾಲ್ ಆಗುತ್ತದೆ. ಇದರಿಂದ ತೂಕ ಅಧಿಕವಾಗುತ್ತದೆ. ಕರುಳಿನ ಸುತ್ತ ಫ್ಯಾಟ್ ಕುಳಿತುಕೊಳ್ಳುತ್ತದೆ. ವ್ಯಾಯಾಮ ಮಾಡಿ ಕರಗಿಸದೇ ಇದ್ದರೆ ಇವೆಲ್ಲ ಕೆಟ್ಟ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದುವರೆಗೂ ಸಾಮಾನ್ಯವಾಗಿದ್ದ ಭಾವನೆಯೆಂದರೆ ಫ್ಯಾಟ್ ತಿಂದರೆ ಫ್ಯಾಟ್ ಆಗುತ್ತೇವೆ ಎಂಬುದು. ಆದರೆ ಇದು ತಪ್ಪು ತಿಳಿವಳಿಕೆ. ನಾವು ಫ್ಯಾಟ್ ತಿಂದೂ ಜೊತೆಗೆ ಕಾರ್ಬೋಹೈಡ್ರೆಟ್ ಅಂಶವಿರುವ ಪದಾರ್ಥಗಳನ್ನು ಕೂಡ ತಿಂದರೆ ಇನ್ನೂ ಬೊಜ್ಜು ಆಗುವುದು ಖಂಡಿತ. ಫ್ಯಾಟ್ ತಿಂದರೆ ಫ್ಯಾಟ್ ಆಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಮ್ಮ ದೇಹಕ್ಕೆ ಪ್ರೊಟೀನ್, ಕೊಬ್ಬಿನ ಅಂಶ ಬೇಕೇಬೇಕು.
ಒಂದು ಗಮನಿಸಬೇಕಾದ ಅಂಶವೆಂದರೆ ರಾಗಿಮುದ್ದೆ, ಕೆಂಪಕ್ಕಿ ಕುಚ್ಚಲಕ್ಕಿ ಇವುಗಳು ಸಹ ಕಾರ್ಬೋಹೈಡ್ರೆಟ್. ಆದರೆ ಇವುಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಆದ್ದರಿಂದ ನಾವು ಹೇಳುವ ಡಯೆಟ್ ನಲ್ಲಿ ಎಲ್ಲ ಬಗೆಯ ಕಾರ್ಬೋಹೈಡ್ರೆಟ್ ಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಲಹೆ ಮಾಡುತ್ತೇವೆ. ಮಧುಮೇಹ ರೋಗಿಗೆ ವೈದ್ಯರು ಹೇಳುವುದು ಡಯೆಟ್ ಮಾಡಿ, ಇಂತಿಷ್ಟೆ ಅಂಶ ತಿನ್ನಬೇಕು ಎಂದು. ಆದರೆ ಸಾಮಾನ್ಯ ಸಂದರ್ಭಗಳಲ್ಲಿ ಅವುಗಳನ್ನು ಅನುಸರಿಸುವವರು ಕಡಿಮೆ.. ಎಲ್ಲರ ಮನೆಗಳಲ್ಲಿಯೂ ಕಾರ್ಬೋಹೈಡ್ರೆಟ್ ಅಂಶ ಇರುವ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ಆದ್ದರಿಂದ ನಾವು ಹೇಳುವ ಡಯೆಟ್ ನಲ್ಲಿ ಶೇಕಡ 75ರಷ್ಟು ಪ್ರಮಾಣದ ಕಾರ್ಬೋಹೈಡ್ರೆಟ್ ಪ್ರಮಾಣವನ್ನು ಶೇಕಡ 20ಕ್ಕೆ ಇಳಿಸುವ ಮಾದರಿಗೆ ಆದ್ಯತೆ ನೀಡುತ್ತೇವೆ.
ಆರೋಗ್ಯಕರ ಫ್ಯಾಟ್ ಗಳನ್ನು ಸೇವಿಸಲು ಸೂಚಿಸುತ್ತೇವೆ. ತುಪ್ಪ, ಬೆಣ್ಣೆ ಸಹ ಆರೋಗ್ಯಕರ ಫ್ಯಾಟ್ ಗಳು. ಮಾಂಸಹಾರ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವ ತಪ್ಪುಭಾವನೆ ಹಲವರಲ್ಲಿದೆ. ಆದರೆ ಮಾಂಸಹಾರ ಸೇವನೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಮಾಡುವುದಿಲ್ಲ. ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಎಂಬುದು ಮುಖ್ಯ. ಅತಿಯಾದರೆ ಯಾವುದು ಸಹ ದೇಹಕ್ಕೆ ಒಳ್ಳೆಯದಲ್ಲ. ಇನ್ನೊಂದು ಅಂಶವೆಂದರೆ ನಾವು ನಾನ್ ವೆಜ್ ಜೊತೆಗೆ ಕಾರ್ಬೋಹೈಡ್ರೆಟ್ ಅಂಶ ಅಧಿಕವಾಗಿರುವ ಮುದ್ದೆ, ಅನ್ನ, ಚಪಾತಿ, ದೋಸೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತೇವೆ. ಆಗಷ್ಟೆ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು.
ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಬೋಹೈಡ್ರೆಟ್ ಅನ್ನು ಗಣನೀಯವಾಗಿ ಕಡಿಮೆ ಮಾಡಲು ಸಲಹೆ ನೀಡುತ್ತೇವೆ. ಈ ರೀತಿ ಮಾಡಿದಾಗ ಇನ್ಸುಲಿನ್ ಅಗತ್ಯತೆ ದೇಹಕ್ಕೆ ಕಡಿಮೆಯಾಗುತ್ತದೆ. ಆಗ ದೇಹ ತನ್ನಲ್ಲಿರುವ ಫ್ಯಾಟ್ ಅನ್ನು ಇಂಧನವಾಗಿ ಬಳಸಲು ಶುರು ಮಾಡುತ್ತದೆ. ಈಗಾಗಲೇ ದೇಹದಲ್ಲಿ ಸಂಗ್ರಹಣೆಯಾಗಿರುವ ಫ್ಯಾಟ್ ಅನ್ನು ಇಂಧನ ಮೂಲವಾಗಿ ಬಳಸಿಕೊಳ್ಳಲು ಶುರು ಮಾಡುತ್ತದೆ. ಆಲ್ಮಂಡ್ ಫ್ಲೋರ್, ಬಳಸಬಹುದು. ಇದಕ್ಕೆ ಅಲ್ಪ ಪ್ರಮಾಣದಲ್ಲಿ ಅಕ್ಕಿಹಿಟ್ಟು ಸೇರಿಸಬಹುದು. ಗೋಧಿಹಿಟ್ಟು ಸೇರಿಸಬಹುದು. ಇವುಗಳಿಂದ ರೊಟ್ಟಿ, ಚಪಾತಿ ಮಾಡಬಹುದು. ಕಾಲಿ ಫ್ಲವರ್ ಬಳಕೆ ಮಾಡಬಹುದು..ಕಿಟ್ ಗಳು ಬಂದಿವೆ. ಅವುಗಳನ್ನು ಬಳಕೆ ಮಾಡಬಹುದು. ಡ್ರೈ ಪ್ರೂಟ್ ಗಳ ಬಳಕೆ ಮಾಡಬಹುದು. ಅವಕಾಡು (ಬಟರ್ ಪ್ರೂಟ್) ಸೇವನೆ ಮಾಡಬಹುದು.
ಡಯಾಬಿಟಿಕ್ ನಿಂದ ಬಳಲುತ್ತಿರುವವರಲ್ಲಿ ಕೆಲವರಿಗೆ ಕಿಡ್ನಿ ಸಮಸ್ಯೆ ಇರುತ್ತದೆ. ಇಂಥ ಸಂದರ್ಭದಲ್ಲಿ ಅವರಿಗೆ ಸೂಕ್ತವಾಗುವ ಡಯೆಟ್ ಸಲಹೆ ಮಾಡುತ್ತೇವೆ. ಎಲ್ಲರಿಗೂ ಒಂದೇ ರೀತಿಯ ಡಯೆಟ್ ಸಲಹೆ ಮಾಡುವುದಿಲ್ಲ ಎಂಬುದು ಗಮನಾರ್ಹ. ಆರೋಗ್ಯಕರ ಫ್ಯಾಟ್ ಇರುವ ಆಹಾರ ಸೇವನೆ ಮಾಡಿದಾಗ ಬೇಗ ಹಸಿವಾಗುವುದಿಲ್ಲ. ಇದರಿಂದ ತಿನ್ನುವ ಆಹಾರದ ಒಟ್ಟು ಪ್ರಮಾಣ ಕಡಿಮೆಯಾಗುತ್ತದೆ. ಈಗಾಗಲೇ ಸಂಗ್ರಹಣೆ ಆಗಿರುವ ಕೊಬ್ಬಿನ ಅಂಶವನ್ನು ದೇಹ ಬಳಕೆ ಮಾಡುತ್ತದೆ.. ಇದರಿಂದ ಇನ್ಸುಲಿನ್ ನಿರೋಧಕತೆ ಹೆಚ್ಚುತ್ತದೆ. ಬಾಡಿ ತೂಕವೂ ಅನಗತ್ಯವಾಗಿ ಹೆಚ್ಚಾಗುವುದಿಲ್ಲ. ಈಗಾಗಲೇ ಮಧುಮೇಹ ನಿಯಂತ್ರಣಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಅದರ ಅವಲಂಬನೆಯನ್ನು ನಿಧಾನವಾಗಿ ಹಂತಹಂತವಾಗಿ ಕಡಿಮೆ ಮಾಡುತ್ತಾ ಬರಬಹುದು. ಈಗಾಗಲೇ ಸಾವಿರಕ್ಕೂ ಹೆಚ್ಚು ಮಧುಮೇಹ ರೋಗಿಗಳಿಗೆ ಸಲಹೆ ಮಾಡಿದ್ದೇವೆ. ಇವರಲ್ಲಿ 400 ಮಂದಿ ಈಗಾಗಲೇ ಔಷಧ ಸೇವನೆ ನಿಲ್ಲಿಸಿದ್ದಾರೆ. ಔಷಧವಿಲ್ಲದೇ ದೇಹದ ಹೆಚ್.ಪಿ.ಎಂ.ಸಿ. ಪ್ರಮಾಣ 6ಕ್ಕಿಂತ ಕಡಿಮೆಯಾದರೆ ಅದನ್ನು ರಿವರ್ಸಡ್ ಡಯೆಬಿಟಿಕ್ ಎಂದು ಕರೆಯಬಹುದು.
ಆರೋಗ್ಯಕರ ಮನುಷ್ಯರಲ್ಲಿ ಆಹಾರ ಸೇವನೆಗಿಂತ ಮೊದಲು ರಕ್ತದಲ್ಲಿನ ಸಕ್ಕರೆ ಅಂಶ 100ಕ್ಕಿಂತ ಕಡಿಮೆಯಿರಬೇಕು. ಆಹಾರ ಸೇವನೆ ಮಾಡಿದ ಎರಡು ಗಂಟೆ ನಂತರ 140ರೊಳಗಿರಬೇಕು. ಇದಕ್ಕಿಂತ ಹೆಚ್ಚಾದಾಗ ಮಧುಮೇಹ ಎಂದು ನಿರ್ಣಯಿಸಲಾಗುತ್ತದೆ. ಇನ್ನೊಂದು ಹೆಚ್ ಪಿ ಎಂ ಸಿ ಯಲ್ಲಿ ಮೂರು ತಿಂಗಳ ಗ್ಲೂಕೋಸ್ ಮೆಮೊರಿ ಟೆಸ್ಟ್ ಅಂಶ 6ಕ್ಕಿಂತ ಕಡಿಮೆ ಇರಬೇಕು. 6 ರಿಂದ 6.5 ಕ್ಕೆ ಬಂದರೆ ಅದು ಬಾರ್ಡರ್ ಲೈನ್ ಡಯಾಬಿಟಿಕ್ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆಯನ್ನು ಟೈಪ್ 2 ಡಯಾಬಿಟಿಸ್ ನಲ್ಲಿ ಮಾಡಬಹುದು. ಟೈಪ್ ಒನ್ ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಉತ್ಪಾದನೆಯೇ ಸ್ಥಗಿತವಾಗಿರುತ್ತದೆ. ಅಲ್ಲಿ ಈ ಮಾದರಿ ಕೆಲಸ ಮಾಡುವುದು ಕಷ್ಟ. ನಾವು ಪ್ರತಿಯೊಬ್ಬ ರೋಗಿಯ ದೇಹಸ್ಥಿತಿ, ಆಹಾರ ಸೇವನೆ ಕ್ರಮ, ಪದ್ಧತಿ ಇವುಗಳನ್ನೆಲ್ಲ ಅಧ್ಯಯನ ಮಾಡಿ ಸಲಹೆ ಮಾಡುತ್ತೇವೆ.