ಮನೆ ಆರೋಗ್ಯ ಖಾಲಿ ಹೊಟ್ಟೆಯಲ್ಲಿ ಈ ರೀತಿ ಕರಿಬೇವು ತಿಂದು ತೂಕ ಇಳಿಸಿಕೊಳ್ಳಿ

ಖಾಲಿ ಹೊಟ್ಟೆಯಲ್ಲಿ ಈ ರೀತಿ ಕರಿಬೇವು ತಿಂದು ತೂಕ ಇಳಿಸಿಕೊಳ್ಳಿ

0

ಬೊಜ್ಜಿನ ಸಮಸ್ಯೆ ಅನೇಕರಿಗೆ ದೊಡ್ಡ ತಲೆನೋವಾಗಿದೆ. ತೂಕ ಇಳಿಸಿಕೊಳ್ಳಲು ಅನೇಕರು ಹರಸಾಹಸ ಪಡುತ್ತಿದ್ದಾರೆ ಆದ್ರೆ ತೂಕ ಮಾತ್ರ ಇಳಿಯುತ್ತಿಲ್ಲ. ಬೊಜ್ಜು ಕರಗಿಸಲು ಸಿಕ್ಕಾಪಟ್ಟೆ ವ್ಯಾಯಾಮ ಮಾಡಿ ಆಸ್ಪತ್ರೆ ಸೇರಬೇಡಿ. ನಿಮ್ಮ ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳೋ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಿ

ತೂಕ ಇಳಿಸಲು ಅತಿಯಾಗಿ ವ್ಯಾಯಾಮ ಮಾಡ್ಬೇಡಿ, ಅತಿಯಾದ ವ್ಯಾಯಾಮ ಅಪಾಯಕಾರಿಯಾಗಿದೆ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದಾಗಿದೆ.

ಬೆಳಗಿನ ಉಪಹಾರವನ್ನು ಸೇವಿಸದಿರುವುದರಿಂದ ಕ್ಯಾಲೋರಿ ಕಳೆದುಕೊಳ್ಳಬಹುದು ಹಾಗೂ ತೂಕವನ್ನು ಕಳೆದುಕೊಳ್ಳಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ನಿಜವಾಗಿ ಹೇಳಬೇಕೆಂದರೆ ಬೆಳಗಿನ ಉಪಹಾರ ಸೇವಿಸದಿದ್ರೆ ಮತ್ತಷ್ಟು ತೂಕ ಹೆಚ್ಚಾಗಲಿದೆ. ಹೀಗಾಗಿ ಬೆಳಗಿನ ಉಪಹಾರವನ್ನು ಯಾವ ಕಾರಣಕ್ಕೂ ಮಿಸ್ ಮಾಡ್ಲೇ ಬೇಡಿ

ಬೆಳಗಿನ ಉಪಹಾರ ಸೇವಿಸದಿದ್ರೆ ಅದು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಷ್ಟೇ ಅಲ್ಲ ಹಸಿವು ಹೆಚ್ಚಾದ ಕಾರಣ ಮಧ್ಯಾಹ್ನದ ಸಮಯದಲ್ಲಿ ಹೆಚ್ಚಿನ ಊಟವನ್ನು ಸೇವಿಸುತ್ತಾರೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಹಾರವನ್ನು ಮಾಡಲೇಬೇಕು.

ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹತ್ತರಿಂದ ಹನ್ನೆರಡು ಚೆನ್ನಾಗಿ ಬೆಳೆದ ಕರಿಬೇವಿನ ಎಲೆಗಳನ್ನು ತಿನ್ನಿ. ಇದು ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ಊಟದ ಮೊದಲು ಒಂದು ಲೋಟ ನೀರು ಕುಡಿಯುವುದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸ್ಥೂಲಕಾಯಕ್ಕೆ ಇದು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ.

ಪ್ರತಿದಿನ ಬೆಳಗ್ಗೆ, ಉಪಹಾರವನ್ನು ತಿನ್ನುವ ಬದಲು, ನೀವು ಒಂದು ಅಥವಾ ಎರಡು ಹಸಿ ಟೊಮೆಟೊಗಳನ್ನು ತಿನ್ನಿ. ಇದ್ರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತೆ. ಊಟ-ತಿಂಡಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಲು ಸಹಕರಿಸುತ್ತೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಜೇನು ತುಪ್ಪವನ್ನು ಬೆರಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ಥೂಲಕಾಯತೆಯ ಚಿಕಿತ್ಸೆಯಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ತರಕಾರಿ ಸೂಪ್ ಮಾಡಿ ಮತ್ತು ಅದಕ್ಕೆ ಕರಿಮೆಣಸು ಸೇರಿಸಿ. ಇದು ನಿಮ್ಮ ಸೂಪ್ ಅನ್ನು ರುಚಿಯಾಗಿಸುವುದಲ್ಲದೆ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಹಿಂದಿನ ಲೇಖನ12 ವರ್ಷಗಳ ಬಳಿಕ ಮೀನದಲ್ಲಿ ಗುರು-ಶುಕ್ರ ಸಂಯೋಗ : 12 ರಾಶಿಗಳ ಮೇಲಾಗುವ ಪರಿಣಾಮ ತಿಳಿಯಿರಿ
ಮುಂದಿನ ಲೇಖನಮದ್ದಿಲ್ಲದೇ ಮಧುಮೇಹ ಗುಣಪಡಿಸಬಹುದು; ಅದು ಹೇಗೆ ಗೊತ್ತಾ?