ಚಿಕ್ಕ ಮಕ್ಕಳಿಗೆ ಅತಿಸಾರ (ಡಯೇರಿಯಾ) ಆಗಾಗ ಕಂಡು ಬರುತ್ತಿರುತ್ತದೆ. ಅತಿಸಾರ ಕೆಲವರಿಗೆ ಸುಲಭವಾಗಿ ವಾಸಿಯಾದರೆ ಇನ್ನು ಕೆಲವರಿಗೆ ಮಾರಣಾಂತಿಕವಾಗಿ ಪ್ರರಿಣಮಿಸುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯ ವಾಗಿ ವರ್ಷದಲ್ಲಿ 2-3 ಬಾರಿಯಾದರೂ ಅತಿಸಾರ ಕಾಣಿಸಿಕೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ದಿನದಲ್ಲಿ ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಬಾರಿ ನೀರಿನಂತೆ ಭೇದಿ ಆದರೆ ಅದನ್ನು ಅತಿಸಾರವೆಂದು ಪರಿಗಣಿಸುತ್ತಾರೆ.
ಅತಿಸಾರ ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಆರಂಭವಾಗುತ್ತದೆ. ಮಲ ವಿಸರ್ಜನೆ ಗಟ್ಟಿಯಾಗಿಲ್ಲದೆ ಹಳದಿಯಾಗಿ ನೀರಿನಂತಿರುತ್ತದೆ ಸಾಮಾನ್ಯವಾಗಿ 3 ರಿಂದ 7 ದಿನ ಇರುತ್ತದೆ ಕೆಲವರಿಗೆ ಇರೋಗ ತೀವ್ರವಾಗಿಯೂ ಕೂಡ ಕಂಡುಬರುತ್ತದೆ.
ನೀರಿನಂಥ ಭೇದಿ ಅಂಟಂಟಾದ ಭೇದಿ :-
ನೀರಿನಂತಬೇದಿಯನ್ನು ಅತಿಸಾರ ಇಲ್ಲವೇ ಡಯೇರಿಯ ಎಂದರೆ, ಅಂಟಿನಂತಹ ಭೇದಿಯನ್ನು ಡಿಸೆಂಟ್ರಿರಿ ಎಂದು ಕರೆಯುತ್ತಾರೆ. ಡಿಸೆಂಟ್ರಿರಿಯಲ್ಲಿ ಮಲದೊಂದಿಗೆ ಅಂಟು ರಕ್ತ ಕೂಡಬೀಳುತ್ತದೆ. ಕಿಬ್ಬೊಟ್ಟೆಯಲ್ಲಿ ನೋವಾಗುತ್ತದೆ. ಮಲವಿಸರ್ಜನೆ ಮಾಡುವಾಗ ಕಷ್ಟ ಪಡಬೇಕಾಗುತ್ತದೆ ಡಿಸೆಂಟ್ರಿಯನ್ನು ಕೊಲೈಟೀಸ್ ಎಂದು ಕರೆಯುತ್ತಾರೆ……
ಕಾಲಾರಾ :-
ಅತಿಸಾರ ಬೇರೆ, ಕಾಲಾರಾ ಬೇರೆ, ಅತಿಸರದಲ್ಲಿ ವಿಸರ್ಜನೆ ನೀರಿನಲ್ಲಿ ಕಾಲರದಲ್ಲಿ ಭೇದಿ ಮತ್ತಷ್ಟು ನೀರಾಗಿರುತ್ತದೆ. ಬೇಧಿಯೊಂದಿಗೆ ವಾಂತಿ ಕೂಡ ಆಗುತ್ತದೆ. ಕಾಲರದಲ್ಲಿ ಬೇಧಿ ಅಕ್ಕಿ ತೊಳೆದ ನೀರಿನಂತಿರುತ್ತದೆ. ಶೀಘ್ರವಾಗಿ ಡಿ ಹೈಡ್ರೇಶನ್ ತಲೆ ದೊರುತ್ತದೆ…..
ಗ್ಯಾಸ್ಟ್ರೋ ಎಂಟರೈಟಿಸ್ :-
ಅತಿಸಾರದಲ್ಲಿ ನೀರಭೇದಿಯೊಂದಿಗೆ ವಾಂತಿ ಕೂಡ ಆಗುತ್ತಿದ್ದರೆ ಗ್ಯಾಸ್ಟ್ರೋ ಎಂಟರೈಟಿಸ್ ಎನ್ನುತ್ತಾರೆ ಇದನ್ನು ಸಾಮಾನ್ಯವಾಗಿ ಜಿ ಇ ಎನ್ನುತ್ತಾರೆ.
ಭೇದಿಯಲ್ಲದ ಬೇಧಿ :-
ಕೆಲವರಿಗೆ ದಿನದಲ್ಲಿ ಒಟ್ಟು 2-3 ಬಾರಿಗಿಂತಲೂ ಹೆಚ್ಚು ಮಲವಿಸರ್ಜನೆಯಾಗುತ್ತದೆ. ಅಷ್ಟು ಮಾತ್ರಕ್ಕೆ ಅವರಲ್ಲಿ ಅತಿಸಾರ ರೋಗ ತೀವ್ರ ತೀವ್ರವಾಗಿದೆ ಎಂದು ಭಾವಿಸಬಾರದು ಇಂತಹ ಸಹಜವಾದ ಮಲವಿಸರ್ಜನೆಗೆ ಹಲವು ಬಾರಿ ಹೋಗುತ್ತಾರೆ. ದಿನದಲ್ಲಿ ಒಟ್ಟು 6-7 ಬಾರಿ ಮಲವಿಸರ್ಜನೆ ಮಾಡುತ್ತಾರೆ. ಹೀಗೆ ಹೆಚ್ಚು ಬಾರಿ ಮಲವಿಸರ್ಜನೆ ಮಾಡುವುದು ರೋಗವಲ್ಲ. ಕೆಲವು ಮಕ್ಕಳು ಹಾಲು ಕುಡಿಯುತ್ತಲೇ ಇಲ್ಲವೇ ಅನ್ನ ತಿನ್ನುತ್ತಲೇ ಮಲವಿಸರ್ಜನೆಗೆ ಹೊರಡುತ್ತಾರೆ ಇಂಥವರಿಗೆ ಆಹಾರ ಸೇವನೆ ಮಾಡುತ್ತಲೇ ಗ್ಯಾಸ್ ಟ್ರೊಕೋಲಿಕ್ ರೆಫ್ಲೆಕ್ಸ್ ಕಾರ್ಯ ಶೀಲವಾಗುತ್ತದೆ… ಅದರಿಂದಾಗಿ ಮೊದಲೇ ಕರುಳುಗಳಲ್ಲಿದ್ದ ಮೊಲವಿಸರ್ಜನೆ ಆಗುತ್ತದೆ ಅಷ್ಟೇ ಹೊರತು ತಿಂದ ಆಹಾರವೇನು ಹೊರಬರುವುದಿಲ್ಲ. ಕೆಲವರಿಗೆ ಇರ್ರಿಟಬಲ್ ಬಪೂಲ್ ಸಿಂಡ್ರೋಮ್ (ಐ ಬಿ ಎಸ್) ಇರುತ್ತದೆ. ಅದರಿಂದ ಕೂಡ ಹೆಚ್ಚು ಬಾರಿ ಮಲವಿಸರ್ಜನೆ ಆಗುತ್ತದೆ, ಹೀಗೆ ಆಗುವುದು ರೋಗವಲ್ಲ ಕೆಲವು ಮಕ್ಕಳಲ್ಲಿ ಮಲ ಎಲೆ ಹಸಿರು ಬಣ್ಣದ ನೋರೆಯಂತೆ ಮನವಿಸರ್ಜನೆ ಆಗುತ್ತದೆ, ಮಲಗಳಲಿ ಯಾವುದೇ ವಾಸನೆ ಇರುವುದಿಲ್ಲ. ಇದು ಕೂಡ ರೋಗ ಬಲ್ಲ ಇವರಿಗೆಲ್ಲ ಯಾವುದೇ ಔಷದಿಯನ್ನು ಬಳಸಬೇಕಾಗಿಲ್ಲ.
ಅತಿಸಾರ ಯಾರಿಗೆ ಬರುತ್ತದೆ ? :-
ಅತಿಸರ ಸಾಮಾನ್ಯವಾಗಿ ಆರು ತಿಂಗಳಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ಬರುತ್ತದೆ. ಪೌಷ್ಟಿಕಾಂಶಗಳ ಕೊರತೆ ಇರುವ ಮಕ್ಕಳಿಗೆ ಅತಿಸಾರವಾಗ ಬರುವುದು ಜಾಸ್ತಿ ತಾಯಿ ಹಾಲಿನ ಕೊರತೆ ಇರೋ ಮಕ್ಕಳಿಗೆ ಹಸುವಿನ ಹಾಲು ಕುಡಿಸುವ ಮಕ್ಕಳಿಗೂ ಅತಿಸಾರ ಉಂಟಾಗುತ್ತದೆ. ಮಕ್ಕಳಿಗೆ ತಕ್ಕತೂಕ ಮತ್ತು ಬೆಳವಣಿಗೆ ಇಲ್ಲದ ಮಕ್ಕಳಿಗೂ ಶುಭ್ರತೆ ಇಲ್ಲದ ಹಾಲು ಕುಡಿಯುವ ಕೊಳಚೆ ಪ್ರದೇಶದಲ್ಲಿ ವಾಸಿಸುವ ರೋಗನಿರೋಧಕ ಶಕ್ತಿ ಕಡಿಮೆ ಇರುವ ಏಡ್ಸ್ ರೋಗವಿರುವ ಮಕ್ಕಳಿಗೂ ಅತಿಸಾರ ಉಂಟಾಗುತ್ತದೆ.
ಹಲ್ಲು ಬೆಳೆಯುವಾಗ :-
ಮಕ್ಕಳಿಗೆ ಹೊಸದಾಗಿ ಹಲ್ಲು ಹುಟ್ಟುವಾಗ ಬೇಧಿಯಾಗುವುದು ಸಹಜವೆಂದು ಕೊಳ್ಳುತ್ತಾರೆ. ಅದು ವಾಸ್ತವವಲ್ಲ ಹಲ್ಲು ಹುಟ್ಟುವಾಗ ವಸಡುಗಳು ನವೆಯಾಗುತ್ತವೆ. ಅದರಿಂದಾಗಿ ಮಕ್ಕಳ ಬಾಯಿಗೆ ಬೆರಳನ್ನು ಆಟದ ಸಾಮಾನುಗಳನ್ನು ತುರುಕಿಕೊಳ್ಳುತ್ತದೆ. ಆಗ ಬೆರಳುಗಳ ಮತ್ತು ಆಟದ ಸಾಮಾನುಗಳನ್ನು ಇರುವ ಕೊಳೆ ಮತ್ತು ಅದರಲ್ಲಿರುವ ರೋಗಾಣುಗಳು ಬಾಯಿಯ ಮೂಲಕ ಹೊಟ್ಟೆಗೆ ಸೇರಿ ಬೇಧಿಯಾಗುತ್ತದೆ ಬೆರಳುಗಳನ್ನು ಆಟದ ಸಾಮಾನುಗಳನ್ನು ಶುಭ್ರವಾಗಿ ಇರಿಸಿಕೊಂಡಿದ್ದರೆ ಅದನ್ನು ಬಾಯಿ ಇಟ್ಟುಕೊಂಡರು ಭೇದಿಯಾಗಲ್ಲ.
ಅತಿಸಾರದ ರೋಗಾಣುಗಳು :-
ಅತಿಸಾರದ ಬ್ಯಾಕ್ಟೀರಿಯ ಮತ್ತು ವೈರಸ್ ಗಳಿಂದ ಬರುತ್ತದೆ ಕೆಲವರಿಗೆ ಹೊಟ್ಟೆಯಲ್ಲಿ ಜಂತುಹುಳುಗಳು ಇರುವುದರಿಂದ ಅಮಿಬೀಯಾಸೀಸ್ ನಿಂದ ಭೇಧಿಯಾಗುತ್ತದೆ. ಚಿಕ್ಕ ಮಕ್ಕಳಿಗೆ ವೈರಸ್ ಸೋಂಕಿನಿಂದ ಅತಿಸಾರ ರೋಗ ಬರುವುದೇ ಹೆಚ್ಚು ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ಜ್ವರ ಬರಬಹುದು ಕೆಲವು ಮಕ್ಕಳಿಗೆ ಅತಿಸಾರದಿಂದ ಫಿಟ್ಸ್ ಕೂಡ ಬರಬಹುದು……
ಮಲ ಪರೀಕ್ಷೆ :-
ಬ್ಯಾಕ್ಟೀರಿಯ ಸೋಂಕಿನಿಂದ ಆತಿಸಾರ ರೋಗ ಬಂದಿದ್ದರೆ ಮಲ ಪರೀಕ್ಷೆಯಲ್ಲಿ ಅಂಟು ರಕ್ತ ಬಿಳಿ ರಕ್ತ ಕಣಗಳು ಕಂಡುಬರುತ್ತದೆ
ಅತಿಸಾರದ ಮಗುವಿನಲ್ಲಿ ಗಮನಿಸಬೇಕಾದ ಲಕ್ಷಣಗಳು :-
ಅತಿಯಾದ ಬಾಯಾರಿಕೆ ಇದೆಯೇ, ಕಣ್ಣುಗಳಲ್ಲಿ ಗೂಳಿಗಳಾಗಿವೆಯೇ, ನಾಲಿಗೆ ಒಣಗಿದೆ, ನಾಡಿಯ ವೇಗ ಜಾಸ್ತಿ ಇದೆಯೇ, ಕಡಿಮೆಯಾಗಿದೆ, ಕೈಬೆರಳುಗಳು ಬತ್ತಿವೆಯೇ, ಮಗುವಿನ ತೂಕ ಕಡಿಮೆಯಾಗಿದೆಯೇ, ಸಾಮಾನ್ಯ ಆರೋಗ್ಯ ಪರಿಸ್ಥಿತಿ ಕ್ಷಣಿಸಿದೆಯೇ, ಚರ್ಮ ಮಡಿಕೆಗಳಾಗಿದೆಯೇ, ಜ್ವರ ಇದೆಯೇ, ಇಲ್ಲವೇ ಇತರ ತೊಂದರೆಗಳ ಏನಾದರೂ ಇವೆ ಎಂಬುದು ಗಮನಿಸಬೇಕು.