ಮನೆ ರಾಷ್ಟ್ರೀಯ ಐದು ವರ್ಷದ ಬಳಿಕ ಭಾರತ-ಚೀನಾ ಮಧ್ಯೆ ನೇರ ವಿಮಾನ ಸೇವೆ ಆರಂಭ..!

ಐದು ವರ್ಷದ ಬಳಿಕ ಭಾರತ-ಚೀನಾ ಮಧ್ಯೆ ನೇರ ವಿಮಾನ ಸೇವೆ ಆರಂಭ..!

0

ನವದೆಹಲಿ : ಭಾರತ ಮತ್ತು ಚೀನಾ ಮಧ್ಯೆ 5 ವರ್ಷದ ಬಳಿಕ ನೇರ ವಿಮಾನ ಸೇವೆ ಆರಂಭಗೊಂಡಿದೆ. ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ನಿರಂತರ ಚರ್ಚೆಗಳ ನಂತರ ಈ ತಿಂಗಳ ಅಂತ್ಯದ ವೇಳೆಗೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ.

ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಮಹತ್ವದ ಸಭೆಯ ಬಳಿಕ ವಿಮಾನ ಹಾರಾಟಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ.

ಅಕ್ಟೋಬರ್‌ 26 ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌಗೆ ಪ್ರತಿನಿತ್ಯ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಮೂಲಗಳ ಪ್ರಕಾರ ಏರ್ ಇಂಡಿಯಾ ವರ್ಷಾಂತ್ಯದ ವೇಳೆಗೆ ಚೀನಾಕ್ಕೆ ತನ್ನ ವಿಮಾನ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ.

ಡೋಕ್ಲಾಮ್ ಘರ್ಷಣೆಯ ಬಳಿಕ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗ ಬಂದ ನಂತರ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಮತ್ತೇ ಆರಂಭಗೊಂಡಿರಲಿಲ್ಲ ಎನ್ನಲಾಗಿದೆ.