ಮನೆ ಕಾನೂನು ವಿಕಲಚೇತನರ ಪಿಂಚಣಿ: ಯೋಧರ ವಿರುದ್ಧ ಕ್ಷುಲ್ಲಕ ಮೇಲ್ಮನವಿ ಸಲ್ಲಿಸುವ ಕೇಂದ್ರದ ಚಾಳಿಗೆ ಸುಪ್ರೀಂ ತರಾಟೆ

ವಿಕಲಚೇತನರ ಪಿಂಚಣಿ: ಯೋಧರ ವಿರುದ್ಧ ಕ್ಷುಲ್ಲಕ ಮೇಲ್ಮನವಿ ಸಲ್ಲಿಸುವ ಕೇಂದ್ರದ ಚಾಳಿಗೆ ಸುಪ್ರೀಂ ತರಾಟೆ

0

ವಿಕಲಚೇತನರ ಪಿಂಚಣಿ ಪ್ರಕರಣಗಳಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ವಿರುದ್ಧ ಕ್ಷುಲ್ಲಕ ಮೇಲ್ಮನವಿ ಸಲ್ಲಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

Join Our Whatsapp Group

ಇಂತಹ ನಿಷ್ಪ್ರಯೋಜಕ ಮೇಲ್ಮನವಿಗಳನ್ನು ತಡೆಯುವುದಕ್ಕಾಗಿ ನೀತಿಯೊಂದನ್ನು ರೂಪಿಸುವಂತೆ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠ ಇದೇ ವೇಳೆ ಸೂಚಿಸಿತು.

ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶದಂತೆ ಅಂಗವೈಕಲ್ಯ ಪಿಂಚಣಿ ಪಡೆಯುವ ಸಶಸ್ತ್ರ ಪಡೆಗಳ ಪ್ರತಿಯೊಬ್ಬರನ್ನೂ ನ್ಯಾಯಾಲಯಕ್ಕೆ ಎಳೆಯುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿತು.

“ನಾವು ಕಂಡ ಹಲವಾರು ಪ್ರಕರಣಗಳು ಸಂಪೂರ್ಣವಾಗಿ ಕ್ಷುಲ್ಲಕ ಮೇಲ್ಮನವಿಗಳಾಗಿವೆ. ಅವುಗಳನ್ನು ಏಕೆ ಸಲ್ಲಿಸಲಾಗುತ್ತಿದೆ? ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿವೆ!” ಎಂದು ಅದು ಕಿಡಿಕಾರಿತು.

ನಿವೃತ್ತ ಯೋಧರೊಬ್ಬರ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಂಗವಿಕಲರ ಪಿಂಚಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀತಿ ರೂಪಿಸಿದೆಯೇ ಎಂಬ ಕುರಿತು ಮೊದಲು ತನಗೆ ತಿಳಿಸುವಂತೆ ಸೂಚಿಸಿ ಪ್ರಕರಣ ಮುಂದೂಡಿತು.