ಮನೆ ರಾಜಕೀಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಕಾರ್ಯದರ್ಶಿ ಸಿ.ಟಿ. ರವಿ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಕಾರ್ಯದರ್ಶಿ ಸಿ.ಟಿ. ರವಿ

0

ಹಾಸನ(Hassan): ಪ್ರಜಾಪ್ರಭುತ್ವದಲ್ಲಿ ಗುಡಿಸುವ ಶಕ್ತಿ ಇರುವುದು ರಾಜ್ಯದ ಜನರಿಗೆ ಮಾತ್ರ. ನಾವು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆ ಉದ್ಘಾಟನೆ ವೇಳೆ ಕಸ ಗುಡಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಓಡಿಸುವುದಾಗಿ ಹೇಳಿದ್ದಾರೆ. ಗುಜರಾತನಲ್ಲೂ ಅದೇ ಮಾತು ಹೇಳಿದ್ದರು ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌’ನವರಿಗೆ ಭಯ ಶುರುವಾಗಿದ್ದು, ಅದಕ್ಕಾಗಿ ಯಾತ್ರೆ ಹೊರಟಿದ್ದಾರೆ. ಏನೇ ಯಾತ್ರೆ ಹೊರಟರೂ, 365 ದಿನ ಓದಿದ ವಿದ್ಯಾರ್ಥಿಗೆ, ಮೂರು ದಿನ ಓದಿದ ವಿದ್ಯಾರ್ಥಿಗೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದರು.

ನನ್ನ ರಕ್ತ ಕಾಂಗ್ರೆಸ್‌’ನಲ್ಲೇ ಇದೆ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತ ಹೋಗಲಿ. ಬೇಡ ಅನ್ನುವವರು ಯಾರು? ಇಷ್ಟು ವರ್ಷದ ರಾಜಕೀಯ ಅನುಭವದಂತೆ, ಬಿಜೆಪಿ ಬರಬೇಕಾದರೆ ಜೆಡಿಎಸ್‌’ಗೆ ರಾಜೀನಾಮೆ ಕೊಟ್ಟು ಹೇಗೆ ಬಂದರೋ, ಅದೇ ರೀತಿ ಕಾಂಗ್ರೆಸ್‌’ಗೆ ಹೋಗಬೇಕಾದರೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ ಎಂದರು.

ಹಿಂದಿನ ಲೇಖನಆರ್‌.ಆರ್.ಆರ್‌ ಸಿನಿಮಾದ ‘ನಾಟು ನಾಟು‘ ಹಾಡಿಗೆ ಗೋಲ್ಡನ್‌ ಗ್ಲೋಬ್‌ ಅವಾರ್ಡ್ಸ್‌
ಮುಂದಿನ ಲೇಖನಐಸಿಸಿ ಏಕದಿನ ರ್ಯಾಂಕಿಂಗ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶ್ರೇಯಾಂಕದಲ್ಲಿ ಉನ್ನತಿ