ಮನೆ ರಾಜ್ಯ ಪತ್ರಿಕಾ ವಿತರಕರಿಗೂ ಕಾರ್ಮಿಕ ಇಲಾಖೆ ಸವಲತ್ತು ನೀಡಲು ಸಚಿವರ ಜತೆ ಚರ್ಚೆ: ಕೆ ವಿ ಪ್ರಭಾಕರ್

ಪತ್ರಿಕಾ ವಿತರಕರಿಗೂ ಕಾರ್ಮಿಕ ಇಲಾಖೆ ಸವಲತ್ತು ನೀಡಲು ಸಚಿವರ ಜತೆ ಚರ್ಚೆ: ಕೆ ವಿ ಪ್ರಭಾಕರ್

0

ಬೆಂಗಳೂರು: ಪತ್ರಿಕಾ ವಿತರಕರಿಗೂ ಕಾರ್ಮಿಕ ಇಲಾಖೆ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕ  ಸಚಿವ ಸಂತೋಷ್ ಲಾಡ್ ಅವರ ಜತೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸೇವೆಯನ್ನು ಸಹ ಪರಿಗಣಿಸಬೇಕು ಹಾಗೂ ಅಂತಹ ಹಿರಿಯರಿಗೂ ಗೌರವ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿಕೊಂಡ ಮನವಿಗೆ  ಮುಖ್ಯಮಂತ್ರಿಗಳು ಸ್ಪಂದಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಸುದ್ದಿ ಮನೆಯ ವರದಿಗಾರರಿಗೆ ಆಗಾಗ ಸನ್ಮಾನಗಳು ನಡೆಯುತ್ತಲೇ ಇರುತ್ತವೆ, ಆದರೆ ಬೆಳಗಾವುದರೊಳಗೆ ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರನ್ನು ಗುರಿತಿಸಿ ಅವರನ್ನು ಸನ್ಮಾಸಿನುವುದು ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಬೇರೆ ಕಾರ್ಮಿಕ ವರ್ಗದಂತೆ ಪತ್ರಿಕಾ ವಿತರರಿಗೂ ಎಲ್ಲ ಸೌಲಭ್ಯಗಳು ಮತ್ತು ನೆರವುಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೂ ಸಹ ಈ ಕುರಿತಾಗಿ ಮಾತುಕತೆ ನಡೆಸಿದ್ದು ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಕಲ್ಪಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ವಿಧಾನ ಪರಿಷತ್ ಸಭಾಪತಿಗಳಾದ  ಬಸವರಾಜ್ ಹೊರಟ್ಟಿ,  ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಯಾ ಶರ್ಮಾ, ರಫೀಕ್ ಭಂಡಾರಿ,  ಸುಬ್ಬು ಹೊಲೆಯಾರ್, ಮತ್ತು ವಿತರಕರಾದ ಜವರಪ್ಪ ರವರುಗಳು  ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.