ಮನೆ ಕ್ರೀಡೆ ಮೊದಲ ಟೆಸ್ಟ್ ಪಂದ್ಯ: ಶ್ರೀಲಂಕಾ ವಿರುದ್ಧ 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

ಮೊದಲ ಟೆಸ್ಟ್ ಪಂದ್ಯ: ಶ್ರೀಲಂಕಾ ವಿರುದ್ಧ 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

0

ಮೊಹಾಲಿಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. 

ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 574 ರನ್ ಪೇರಿಸಿದೆ. ರವೀಂದ್ರ ಜಡೇಜಾ ಅಜೇಯ 175 ರನ್ ಹಾಗೂ ರಿಷಬ್ ಪಂತ್ 96 ರನ್ ಗಳ ನೆರವಿನೊಂದಿಗೆ ಭಾರತ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಟೀಂ ಇಂಡಿಯಾ ಪರ ಮಾಯಾಂಕ್ ಅಗರವಾಲ್ 33, ರೋಹಿತ್ ಶರ್ಮಾ 29, ಹನುಮ ವಿಹಾರಿ 58, ವಿರಾಟ್ ಕೊಹ್ಲಿ 45, ಶ್ರೇಯಸ್ ಅಯ್ಯರ್ 27, ರವಿಚಂದ್ರನ್ ಅಶ್ವಿನ್ 61 ಹಾಗೂ ಮೊಹಮ್ಮದ್ ಶಮಿ ಅಜೇಯ 20 ರನ್ ಗಳಿಸಿದ್ದಾರೆ. 

ಶ್ರೀಲಂಕಾ ಪರ ಬೌಲಿಂಗ್ ನಲ್ಲಿ ಸುರಂಗಾ ಲಕ್ಮಲ್, ವಿಶ್ವ ಫರ್ನಾಂಡೋ, ಲಸಿತ್ ಎಂಬುಲ್ದೇನಿಯ ತಲಾ 2 ವಿಕೆಟ್ ಪಡೆದಿದ್ದಾರೆ. ಲಹಿರು ಕುಮಾರ, ಧನಂಜಯ್ ಡಿ ಸಿಲ್ವಾ ತಲಾ 1 ವಿಕೆಟ್ ಪಡೆದಿದ್ದಾರೆ. 

ಹಿಂದಿನ ಲೇಖನನಕಲಿ ಸಹಿ ಬಳಸಿ ಹಣ ದುರ್ಬಳಕೆ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್‍ಐಆರ್
ಮುಂದಿನ ಲೇಖನಬಿಎಸ್ ವೈ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ: ಬಸವರಾಜ ಬೊಮ್ಮಾಯಿ.