ಮನೆ ಕೃಷಿ ನೈಸರ್ಗಿಕ ಪದ್ಧತಿಯಲ್ಲಿ ಹಣ್ಣಾದ ಮಾವು ಆರೋಗ್ಯಕ್ಕೆ ಪೂರಕ: ಡಾ. ಬಗಾದಿ ಗೌತಮ್

ನೈಸರ್ಗಿಕ ಪದ್ಧತಿಯಲ್ಲಿ ಹಣ್ಣಾದ ಮಾವು ಆರೋಗ್ಯಕ್ಕೆ ಪೂರಕ: ಡಾ. ಬಗಾದಿ ಗೌತಮ್

0

ಮೈಸೂರು(Mysuru): ಯಾವುದೇ ರಾಸಾಯನಿಕ ಪದಾರ್ಥಗಳ ಬಳಸದೇ ನೈಸರ್ಗಿಕ ಪದ್ಧತಿಯಲ್ಲಿ ಹಣ್ಣಾಗಿರುವ ಮಾವು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಹಾರ್ಡಿಂಜ್ ಸರ್ಕಲ್‌ನಲ್ಲಿರುವ ಕುಪ್ಪಣ್ಣ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ -2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಕಾಲ ಮಾವು ಮೇಳವನ್ನು ಆಯೋಜಿಸಲಾಗಿದೆ. ಬೇರೆ ಬೇರೆ ತಳಿಯ ಮಾವುಗಳು ಒಂದೇಕಡೆ ಸಿಗುವುದರ ಜೊತೆಗೆ ಇತರೆಡೆಗಿಂತ ಕಡಿಮೆ ಸಿಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಂದಾಜು 7887 ಎಕರೆ ವಿಸ್ತೀರ್ಣದಲ್ಲಿ ಮಾವು ಬೆಳೆದಿದ್ದು, ವಾರ್ಷಿಕ ಸರಾಸರಿ 30 ರಿಂದ 35 ಟನ್ ಮಾವು ಉತ್ಪಾದನೆ ಅಂದಾಜಿಸಲಾಗಿದೆ. ಮಾವು ಮೇಳದಲ್ಲಿ 26 ಮಳಿಗೆಗಳನ್ನು ತೆರೆದಿದ್ದು, ನೈಸರ್ಗಿಕವಾಗಿ ಮಾಗಿಸಿರುವ 16 ವಿವಧ ತಳಿಗಳನ್ನು ಮಾರಾಟಕ್ಕೆ ಪ್ರದರ್ಶಿಸಲಾಗಿದೆ. ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾವು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಮಾವು ಮೇಳದಲ್ಲಿ ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಕನಕಪುರದ ರೈತರು ಬೆಳೆದ ಮಾವಿನಹಣ್ಣುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾವು ಮೇಳವು ಮೇ 27 ರಿಂದ ಮೇ 29 ರವರೆಗೆ 3 ದಿನಗಳ ಕಾಲ ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿಳಾದ ಡಾ.ಮಂಜುನಾಥಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ರುದ್ರೇಶ್ ಹಾಗೂ ಇತರೆ  ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿಂದಿನ ಲೇಖನಲಾರಿ–ಕಾರಿನ ನಡುವೆ ಅಪಘಾತ: ಸ್ಥಳದಲ್ಲೇ ನಾಲ್ವರು ಸಾವು
ಮುಂದಿನ ಲೇಖನಪರಿಷ್ಕರಣೆ ಸಮಿತಿ ಕೈಬಿಡಿ, ಹಳೆಯ ಪಠ್ಯಕ್ರಮ ಮುಂದುವರಿಸಿ: ಎಚ್.ವಿಶ್ವನಾಥ್ ಆಗ್ರಹ