ಮನೆ ಅಪರಾಧ ಐಪಿಎಸ್ ಅಧಿಕಾರಿ ಜೊತೆ ದಿವ್ಯಾ ಹಾಗರಗಿ: ಫೋಟೊ ವೈರಲ್

ಐಪಿಎಸ್ ಅಧಿಕಾರಿ ಜೊತೆ ದಿವ್ಯಾ ಹಾಗರಗಿ: ಫೋಟೊ ವೈರಲ್

0

ಬೆಂಗಳೂರು(Bengaluru): ಪಿಎಸ್‌ಐ(PSI) ನೇಮಕಾತಿ ಅಕ್ರಮದಲ್ಲಿ ತಲೆ ಮರೆಸಿಕೊಂಡಿರುವ ಕಲಬುರಗಿ(Kalburgi) ಬಿಜೆಪಿ(BJP) ನಾಯಕಿ(Leader) ದಿವ್ಯಾ ಹಾಗರಗಿ(Divya Hagaragi) ಜೊತೆ ಐಪಿಎಸ್(IPS) ಅಧಿಕಾರಿ(Officer) ರವಿ ಡಿ. ಚನ್ನಣ್ಣನವರ್(Ravi D Channannanavar) ಕುಳಿತಿರುವ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ದಿವ್ಯಾ ಹಾಗರಗಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಎಂಬುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

ಇದರ ಬೆನ್ನಲ್ಲೇ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜತೆ ದಿವ್ಯಾ ಹಾಗರಗಿ ಗುರುತಿಸಿಕೊಂಡಿದ್ದ ಪೋಟೋಗಳು ವೈರಲ್ ಆಗಿದ್ದವು. ಇದೀಗ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ದಿವ್ಯಾ ಹಾಗರಗಿ ರೈಲಿನ ಬರ್ತ್‌ನಲ್ಲಿ ಕೂತಿರುವ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪೊಲೀಸ್ ಇಲಾಖೆಯ ವಾಟ್ಸ್ ಆಯಪ್ ಗ್ರೂಪ್‌ಗಳಲ್ಲಿ ಈ ಫೋಟೊ ಹರಿದಾಡುತ್ತಿದೆ.

ಸದರಿ ಫೋಟೋವನ್ನು ವ್ಯಕ್ತಿಯೊಬ್ಬ ಸೆಲ್ಫಿ ತೆಗೆದಿದ್ದು, ದಿವ್ಯಾ ಹಾಗರಗಿ ಪಕ್ಕದಲ್ಲಿ ರವಿ ಡಿ ಚನ್ನಣ್ಣನವರ್ ಕೂತು ಹರಟೆ ಹೊಡೆಯುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆ ರವಿ ಚನ್ನಣ್ಣನವರ್ ಕೂತಿರುವ ಚಿತ್ರ ಇದೀಗ ಬಹು ಚರ್ಚೆಗೆ ನಾಂದಿ ಹಾಡಿದೆ. ಈಗ ಫೇಸ್‌ಬುಕ್, ವಾಟ್ಸ್ ಆಪ್‌ಗಳಲ್ಲಿ ವೈರಲ್ ಆಗಿರುವ ಈ ಫೋಟೋಗಳ ಬಗ್ಗೆ ಜನರು ಬಗೆಯಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಒಡತಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಅವರ ಪತಿಯನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದಿವ್ಯಾ ಒಡೆತನಕ್ಕೆ ಸೇರಿದ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಎಸಗಿದ್ದರು. ಈ ಸಂಬಂಧ ವೀರೇಶ್ ಎಂಬಾತ ಸಿಕ್ಕಿಬಿದ್ದಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಜ್ಞಾನ ಜ್ಯೋತಿ ಶಾಲೆಯ ಮೂವರು ಸಿಬ್ಬಂದಿ ಹಾಗೂ ಮೂವರು ಪಿಎಸ್‌ಐ ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.