ಮನೆ ಜ್ಯೋತಿಷ್ಯ ತಲೆ ಸುತ್ತು

ತಲೆ ಸುತ್ತು

0

          ತಲೆ ಸುತ್ತು ಎರಡು ವಿಧಗಳು ಒಂದು ಸಾಮಾನ್ಯವಾಗಿ ತಲೆ ಸುತ್ತುವುದು ಇದಕ್ಕೆ ಕಾರಣ ಮಾನವ ದೇಹದಯ ಬೇರೆ ಪ್ರಾಣಿಗಳಿಂದ ಭಿನ್ನ ಎಲ್ಲಾ ಪ್ರಾಣಿ ಮತ್ತು ಮನುಷ್ಯನ ಮಿದುಳು ಅವನ ತಲೆಯ ಭಾಗದಲ್ಲಿರುತ್ತದೆ. ಎಲ್ಲಾ ಪ್ರಾಣಿಗಳ ದೇಹಕ್ಕೆ ಸಮಾನಾಂತರವಾಗಿ ತಲೆ ಮತ್ತು ಮಿದುಳಿರುತ್ತದೆ. ಆದರೆ ಮನುಷ್ಯನ ದೇಹದ ಮೇಲು ಭಾಗದಲ್ಲಿ ತಲೆ ಮತ್ತು ಮಿದುಳಿರುತ್ತದೆ.

Join Our Whatsapp Group

ಆದ್ದರಿಂದ ಹೃದಯವು ರಕ್ತವನ್ನು ಪಂಪ್ ಮಾಡಿ ಅದರ ವಿರುದ್ಧ ದಿಕ್ಕಿನಲ್ಲಿ ಮಿದುಳಿಗೆ ಕಳಿಸಬೇಕಾಗಿರುತ್ತದೆ ನಮ್ಮ ದೇಹದ ಶೇಕಡ 40 ಭಾಗದ ರಕ್ತವು ಮಿದುಳಿಗೆ ಹೋಗಿ ಬರುತ್ತದೆ ನಾವು ನಿಂತಾಗಲೂ ಸಹ ರಕ್ತದ ಒತ್ತಡದಿಂದ ಮಿದುಳಿಗೆ ಹೋಗಬೇಕಾಗುತ್ತದೆ. ನಮ್ಮ ರಕ್ತ ಸಂಚಲನೆಯು ಮಿದುಳಿಗೆ ಹೋಗುವುದು ಅರ್ಧ ನಿಮಿಷ ನಿಂತರೂ ನಾವು ಪ್ರಜ್ಞೆ ತಪ್ಪಿ ಕೋಮಾಗೆ ಹೋಗುತ್ತೇವೆ. ಇನ್ನು ಒಂದು ನಿಮಿಷ ನಿಂತರೆ ಮತ್ತೆ ಪ್ರಜ್ಞೆ ಬಾರದೆ ಶಾಶ್ವತವಾಗಿ ಕೋಮಾಗೆ ಹೋಗಿಬಿಡುತ್ತೇವೆ ಆದ್ದರಿಂದ ಸ್ವಯಂಚಾಲಿತವಾಗಿ ನಮ್ಮ ಅರಿವಿಗೆ ಬಾರದ ಹಾಗೆ ಈ ಕಾರ್ಯ ನಡೆಯುತ್ತದೆ. ನಾವು ನಿಂತಾಗ ಹೃದಯಕ್ಕೆ ರಕ್ತದೊತ್ತಡ ಕಡಿಮೆಯಾಗದೆ, ಕಾಲಿನ ರಕ್ತನಾಳಗಳು ಸಂಕುಚಿತಗೊಂಡು ಕಾಲಿಗೆ ಹೆಚ್ಚು ರಕ್ತ ಹೋಗದಂತೆ ಈ ಸ್ವಯಂಚಾಲಿತ ರಕ್ತನಾಳ ಗಳು ಅಡ್ಡಿ ಮಾಡುತ್ತದೆ. ಇದರಿಂದ ಮಿದುಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪ್ರವಹಿಸಲು ಸಾಧ್ಯವಾಗದು.

    ನಮ್ಮ ದೇಹದಲ್ಲಿ ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ಆಗ ದೇಹ ಹಗುರವಾದಂತೆ ಅನುಭವ. ಕಣ್ಣು ಕತ್ತಲಾದಂತೆ ಭಾಸವಾಗುತ್ತದೆ. ಕಾಲುಗಳಲ್ಲಿ ಶಕ್ತಿ ಉಡುಗಿ ಕೆಳಕ್ಕೆ ಕುಸಿಯುತ್ತೇವೆ

ಕೆಳಕ್ಕೆ ಬೀಳದಂತೆ ಏನಾದರೂ ಹಿಡಿದು ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ನಿಧಾನವಾಗಿ ಮಲಗುತ್ತೇವೆ.ಬವಳಿ ಬಂದಂತೆ, ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ ಕೆಲವು ಸಲ ಅರಿವು ತಪ್ಪಬಹುದು. ಅವನು ಮಲಗಿದಾಗ ಹೃದಯದ ಸಮಕ್ಕೆ ತಲೆಯ ಮಿದುಳು ಬರುತ್ತದೆ. ಆಗ ರಕ್ತ ಮತ್ತೆ ಮಿದುಳಿನಲ್ಲಿ ಸಂಚರಿಸಿ,

ಉಡಗಿದ ಶಕ್ತಿ ಮರಳಿ ಬರುತ್ತದೆ ಮತ್ತೆ ನಿಬ್ಬಲು ಪ್ರಯತ್ನಿಸುತ್ತಾನೆ. ಮತ್ತೆ ಕುಸಿಯಬಹುದು. ಕೈಕಾಲು ಅದುರುವುದಿಲ್ಲ ವಾಂತಿಯಾಗದು, ಅವನ ಮುಖ ಬಿಳುಚಿಕೊಂಡಿರುತ್ತದೆ, ಮೈ ಬೆವರಬಹುದು. ಮತ್ತೆ ನಿಂತಾಗ ರೋಗಿಗೆ ಕತ್ತಲು ಕವಿದಂತೆ ಭಾಸವಾಗುತ್ತದೆ ಕೆಲವು ನಿಮಿಷಗಳಲ್ಲಿ ಸರಿ ಹೋಗಬಹುದು

 ಎರಡನೆಯ ವಿಧದ ತರಸುತ್ತು :

      ಇದರಲ್ಲಿ ರೋಗಿಗೆ ತಲೆ ಸುತ್ತಿ ತಿರುಗುವಂತೆ ಭಾಸವಾಗುತ್ತದೆ. ಇದನ್ನು ಭ್ರಮಣವೆನ್ನುತ್ತೇವೆ. ಅವನಿಗೆ ಸುತ್ತಲ ಆವರಣ ಸ್ಥಿರವಾಗಿ ತನ್ನ ತಲೆ ಮಾತ್ರ ಗಿರ್ರನೆ ತಿರುಗುವಂತೆ ಭಾಸವಾಗುತ್ತದೆ. ಇದನ್ನು ‘ಅಂಕರ್ ಭ್ರಮಣ’ ಎನ್ನುತ್ತೇವೆ ಅಥವಾ ತನ್ನ ತಲೆ ಮಾತ್ರ ಸ್ಥಿರವಾಗಿ ಸುತ್ತಲ ಆವರಣ ಮತ್ತು ವಸ್ತುಗಳು ಮಾತ್ರ ಗಿರ್ರನೆ ಸುತ್ತುವ ಅನುಭವ ಇವನ್ನು ‘ಬಾಹ್ಯ ಭ್ರಮಣ’ ಎನ್ನುತ್ತೇವೆ. ಹೀಗೆ ಭ್ರಮಣವಾದಾಗ ವಾಂತಿ, ವಾಕರಿಕೆ ಬರುತ್ತದೆ. ಕೆಲವು ಸಲ ಕಾಲಿನ ಶಕ್ತಿ ಹುದುಗಿಹೋಗಿ ನೆಲದ ಮೇಲೆ ಕುಸಿಯುವ ಸಂಭವ ಕೆಲವರಿಗೆ ಕುಳಿತಿದ್ದಾಗ, ಆಕಸ್ಮಿಕವಾಗಿ ನಿಂತಾಗ, ಮಲಗಿ ವಿದ್ದಾಗ ಹೀಗೆ ಆಗುವ ಸಂಭವ ಇರುತ್ತದೆ. ಅಂದರೆ ಸ್ಥಾನಪಲ್ಲಟವಾದಾಗ, ಆಗ ಕಿವಿಯು ಮುಚ್ಚಿದಂತೆ ಕಿವಿಡಾಗುವುದು ಅಥವಾ ಸಮುದ್ರ ಭೋರಿಯುವ ಶಬ್ದ ಕೇಳಿಸುತ್ತದೆ darnroaton sy drenget

ಕೆಲವು ನಿಮಿಷದಲ್ಲಿ ಸರಿ ಹೋಗುತ್ತದೆ. ಈ ರೀತಿಯ ತಲೆ ಸುತ್ತಿಗೆ ಎಚ್ಚರಿಕೆ ಅಗತ್ಯ. ಕಾರಣ, ಮಿದುಳಿಗೆ ರಕ್ತ ಸಂಚಾರವಾಗದೆ ಅಥವಾ ಕಡಿಮೆಯಾಗಿ, ತಲೆ ಪೆಟ್ಟು ಬಿದ್ದು ರಕ್ತ ಪ್ರಮಾಣ ಕಡಿಮೆ ಆದರೆ, ವಾಂತಿ ಬೇಧಿಯಾಗಿ ನೀರು ಮತ್ತು ಲವಣದ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಕಡಿಮೆ ಆಗಿ ಬವಳಿಬಂದಂತೆ ಆಗುತ್ತದೆ. ರಕ್ತದ ಒತ್ತಡ ಕಡಿಮೆ ಮಾಡಲು ನಾವು ತೆಗೆದುಕೊಳ್ಳುವ ಔಷಧದಿಂದ ಆಕಸ್ಮಿಕವಾಗಿ ಕಡಿಮೆಯಾಗಿ, ಬವಳಿ ಬರುತ್ತದೆ.

          ರಕ್ತಹೀನತೆ ಇದ್ದಾಗ, ಮಿದುಳಿಗೆ ಸಾಕಷ್ಟು ರಕ್ತ ಚಲನೆಯಾದರೂ ಸದ ರಕ್ತದಲ್ಲಿ ಆಮ್ಲಜನಕ ಮತ್ತು ಗೂಕೋಸ್ ಪ್ರಮಾಣ ಕಡಿದಮೆಯಾಗುತ್ತದೆ. ಇದರಿಂದ ಬವಳಿ ಬರುತ್ತದೆ. ರಕ್ತದೊತ್ತಡ ಹೆಚ್ಚಾದರೂ ಅಥವಾ ಕಡಿಮೆಯಾದರೂ ತಲೆ ಸುತ್ತು ಬರುತ್ತದೆ. ಪಿತ್ತೋದ್ರೇಕ ಉಂಟಾದರೂ ಬವಳಿ ಬರುತ್ತದೆ. ಕಿವಿಯ ಒಳಭಾಗದಲ್ಲಿ ಒಂದು ಸ್ಥಿತಿ ಚಲನ ಸಂವೇದನಾ ಕೇಂದ್ರವಿದೆ. ಇದು ಮುಖ್ಯವಾಗಿ ತಲೆಯ ಸ್ಥಾನವನ್ನು ದೇಹ ಮತ್ತು ಪರಿಸರಕ್ಕೆ ಹೊಂದಿದಂತೆ ಕಾರ್ಯ ನಿರ್ವಹಿಸುತ್ತದೆ. ಇದರ ಕಾರ್ಯದಲ್ಲಿ ವ್ಯತ್ಯಾಸವಾದರೂ ಸಹ ತಲೆ ಸುತ್ತು ಬರತ್ತುದೆ.

       ಯಾವ ಕಾಯಿಲೆಯೂ ಇಲ್ಲದೆ ತಲೆ ಸುತ್ತು ಬರಬಹುದು. ನಾವು ಪ್ರಪಾತ ನೋಡಿದಾಗ, ಭಯಂಕರ ಸಮುದ್ರದ ಅಲೆ ನೋಡಿದಾಗ ಅಥವಾ ಭಯಂಕರವಾದ ವಸ್ತು ಅಥವಾ ಅವಘಡಗಳನ್ನು ನೋಡಿದಾಗ ತಲೆ ಬವಳಿ ಬರುತ್ತದೆ. ಕಾರಣ ನೋಡಿದಾಗ ಹೆದರಿಕೆಯಿಂದ ನಮ್ಮ ಹೃದಯದ ಬಡಿತ ಕ್ಷಣಕಾಲ ಕ್ಷೀಣಿಸುತ್ತದೆ. ಆಗ ಮಿದುಳಿನ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗಿ, ತಲೆಸುತ್ತು ಬರುತ್ತದೆ. ನಾವು ಜೋಲಿ ಆಡುವಾಗ ಅಥವಾ ಬಸ್ಸಿನಲ್ಲಿ ಬೆಟ್ಟ ಹತ್ತುವಾಗ ‘ಅಂತರ್ ಭ್ರಮಣ’ ಅಥವಾ ‘ಬಾಹ್ಯ ಭ್ರಮಣ’ದಿಂದ ಹೊಟ್ಟೆ ತೊಳಸಿದಂತಾಗಿ ವಾಂತಿಯಾಗುತ್ತದೆ.

ಆಗಾಗ ತಲೆಸುತ್ತು ಬರುತ್ತಿದ್ದರೆ ಮಿದುಳಿನ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟಿದರೆ, ರಕ್ತನಾಳಗಳಲ್ಲಿ ಆಡಚಣೆ, ಕ್ಯಾನ್ಸರ್ ಗಡ್ಡೆಗಳು ಕಾಣಿಸಿಕೊಂಡಾಗ, ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಕಟ್ಟಿದಾಗ, ಅಪಾಯ ಇರುತ್ತದೆ. ಆದ್ದರಿಂದ ತಜ್ಞ ವೈದ್ಯರ ಸಲಹೆ ಅಗತ್ಯ.