ಮನೆ ಅಪರಾಧ ತಂದೆ ಹತ್ಯೆಗೆ ಮಗನಿಂದಲೇ ಸುಪಾರಿ: ಮೂವರ ಬಂಧನ

ತಂದೆ ಹತ್ಯೆಗೆ ಮಗನಿಂದಲೇ ಸುಪಾರಿ: ಮೂವರ ಬಂಧನ

0

ಬೆಂಗಳೂರು: ತಂದೆ ಹತ್ಯೆಗೆ 1 ಕೋಟಿ ರೂಪಾಯಿ ಸುಫಾರಿ ನೀಡಿದ್ದ ಮೂವರು ಆರೋಪಿಗಳನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಫಾರಿ ನೀಡಿದ ಪುತ್ರ ಮಣಿಕಂಠ, ಸುಫಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನು ಬಂಧಿಸಲಾಗಿದೆ.

ಫೆಬ್ರವರಿ 13ರಂದು ಪಣತ್ತೂರಿನ ಕಾವೇರಪ್ಪ ಲೇಔಟ್ ನ ಅಪಾರ್ಟ್ ಮೆಂಟ್ ಪಾರ್ಕಿಂಗ್ ಲಾಟ್ ನಲ್ಲಿ ‌ನಾರಾಯಣಸ್ವಾಮಿ ಅವರ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ರ ಮಣಿಕಂಠನನ್ನು ವಶಕ್ಕೆ‌ ಪಡೆದು ಪ್ರಶ್ನಿಸಿದಾಗ ಸುಫಾರಿ ನೀಡಿರುವ ಸಂಗತಿ ಬೆಳಕಿಗೆ ಬಂದಿತ್ತು.

ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಅಪ್ಪ-ಮಗ ನಡುವೆ ಕೌಟುಂಬಿಕ ಕಲಹವಿತ್ತು. ಆಸ್ತಿ ಪಡೆಯಲು ಹಂತಕರಿಗೆ 1 ಕೋಟಿಗೆ ಮಾತುಕತೆ ನಡೆಸಿ ಮುಂಗಡವಾಗಿ 1 ಲಕ್ಷ ನೀಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಫಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ಸಹಚರ ನವೀನ್ ಫೆ.13ರಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ನಾರಾಯಣಸ್ವಾಮಿ ಅವರನ್ನು ಕೊಲೆ‌ ಮಾಡಿ ಪರಾರಿಯಾಗಿದ್ದರು.

ಆರೋಪಿ ಮಣಿಕಂಠ ಮೊದಲ‌ ಪತ್ನಿ ಕೊಂದ ಆರೋಪದಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದು ಎರಡನೇ ವಿವಾಹವಾಗಿದ್ದ. ಈಕೆಗೂ ಒಂದು ಹೆಣ್ಣು ಮಗುವಿದೆ. ಹೀಗಿದ್ದರೂ ಬೇರೆ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ‌‌. ಈ ವಿಚಾರ ಗೊತ್ತಾಗುತ್ತಿದ್ದಂತೆ ಎರಡನೇ ಪತ್ನಿ ಪತಿಯಿಂದ ದೂರವಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ನಡುವೆಯೂ ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಈ ವಿಚಾರ ಅರಿತ ನಾರಾಯಣಸ್ವಾಮಿ, ಡೈವೋರ್ಸ್ ನೀಡಬೇಡ ಎಂದು ಮಗನ ಬಳಿ ಮನವಿ ಮಾಡಿಕೊಂಡಿದ್ದ. ಇದಕ್ಕೆ ಮಗ‌ ತಲೆಕೆಡಿಸಿಕೊಂಡಿರಲಿಲ್ಲ. ಜೀವನ ನಿರ್ವಹಣೆಗೆ ಕಷ್ಟವಾಗುತ್ತೆ ಎಂದು ತನ್ನ ಹೆಸರಿನಲ್ಲಿದ್ದ ಫ್ಲ್ಯಾಟ್​ನ್ನು ಸೊಸೆಗೆ ರಿಜಿಸ್ಟರ್ ಮಾಡಲು ಮುಂದಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಣಿಕಂಠ ಹಾಗೂ ಅವನ ತಂದೆ ನಾರಾಯಣಸ್ವಾಮಿ ನಡುವೆ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು.‌ ಹೀಗಾಗಿ ಸುಫಾರಿ ಪಡೆದು ಬಂದವರು ನಾರಾಯಣಸ್ವಾಮಿಯನ್ನು ಕೊಂದು‌ ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಇಂದು ನನ್ನ ಪಾಲಿನ ಸಾರ್ಥಕತೆಯ ದಿನ: ಬಿ.ಎಸ್.ಯಡಿಯೂರಪ್ಪ
ಮುಂದಿನ ಲೇಖನಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ